alex Certify ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

ತನ್ನ ಹೆಸರನ್ನು ಬಳಸಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡುವ ವಂಚಕರ ಬಗ್ಗೆ ಜಾಗೃತಿಯಿಂದ ಇರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ಎಚ್ಚರಿಸಿದೆ.

ಸಂದರ್ಶನ, ತರಬೇತಿ ಹಾಗೂ ಕೆಲಸದ ನೆಪದಲ್ಲಿ ದುಡ್ಡು ಕೀಳುವ ವಂಚಕರಿಂದ ಎಚ್ಚರಿಕೆಯಿಂದ ಇರಲು ಕೋರಿರುವ ಇಂಡಿಗೋ, “ಸಂದರ್ಶನ ನಡೆಸಲು ಅಥವಾ ತರಬೇತಿ ನೀಡಲು ವಿಮಾನಯಾನ ಸಂಸ್ಥೆ ಯಾವುದೇ ಶುಲ್ಕ ಕೇಳುವುದಿಲ್ಲ. ಇಂಥ ವಿಚಾರಗಳು ಕಂಡುಬಂದಲ್ಲಿ ಪೊಲೀಸರಿಗೆ ವಿಷಯ ಮುಟ್ಟಿಸಲು ಇಂಡಿಗೋ ಸಲಹೆ ನೀಡುತ್ತದೆ. ಇಂಥ ಪ್ರಕರಣಗಳು ದಾಖಲಾದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಇದೇ ವಿಚಾರವಾಗಿ ಜಾಗೃತಿ ಮೂಡಿಸಲು ಇಂಡಿಗೋ ಮುಂದಾಗಿದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಇಂಥ ವಂಚಕ ಜಾಲಗಳ ವಿರುದ್ಧ ಅಭಿಯಾನಕ್ಕೆ ಇಂಡಿಗೋ ಮುಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...