ಬೆಂಗಳೂರು : ಪೊಲೀಸ್ ಇಲಾಖೆಗೆ ಬಲ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಜ್ಜೆಯಿಟ್ಟಿದ್ದು, 1095 ಸಬ್ ಇನ್ ಸ್ಪೆಕ್ಟರ್ ಗಳು ಹಾಗೂ ಕಾನ್ ಸ್ಟೇಬಲ್ ಗಳ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
ಕಲ್ಯಾಣ ಕರ್ನಾಟಕ ವೃಂದ ಹಾಗೂ ರಾಜ್ಯ ವೃಂದ ಎರಡಕ್ಕೂ ಅನ್ವಯವಾಗುವಂತೆ 1095 ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ ಸ್ಟೇಬಲ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
ಬೆಂಗಳೂರಿಗೆ ಹೊಸದಾಗಿ 2454 ಹುದ್ದೆಗಳನ್ನು ಸೃಜಿಸಲು ಕೂಡ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ . 2023-24ರಲ್ಲಿ 100 ಸಬ್ ಇನ್ಸ್ಪೆಕ್ಟರ್, 450 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗಳು ಹಾಗೂ 2024-25ನೇ ಸಾಲಿನಲ್ಲಿ 95 ಸಬ್ ಇನ್ಸ್ಪೆಕ್ಟರ್ಗಳು, 450 ಕಾನ್ಸ್ಪೆಬಲ್ ಹುದ್ದೆಗಳನ್ನು ನೇರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ.
ಎರಡು ಹಂತದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವಂತೆ ಸರ್ಕಾರ ಸೂಚನೆ ನೀಡಿದ್ದು, ಈ ಮೂಲಕ ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಅದೇ ರೀತಿ 5 ಸಂಚಾರ ಪೊಲೀಸ್ ಠಾಣೆಗಳು ಹಾಗೂ 6 ಮಹಿಳಾ ಠಾಣೆಗಳನ್ನು ಆರಂಭಿಸಲು ಆದೇಶ ನೀಡಲಾಗಿದೆ.