ಮಂಗಳೂರು: ಮೂಡಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜೂನ್ 7, 8ರಂದು ಆಳ್ವಾಸ್ ಪ್ರಗತಿ -2024 ಉದ್ಯೋಗ ಮೇಳ ಆಯೋಜಿಸಿದ್ದು, 20,000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಭಾಗವಹಿಸುವ ನಿರೀಕ್ಷೆ ಇದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಸಿಎಸ್ಆರ್ ಚಟುವಟಿಕೆಯಡಿ ಉದ್ಯೋಗ ಮೇಳವನ್ನು ಉಚಿತವಾಗಿ ಆಯೋಜಿಸಿದ್ದು, ನೇಮಕಾತಿ ನಡೆಸುವ ಕಂಪನಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 300ಕ್ಕೂ ಅಧಿಕ ಕಂಪನಿಗಳು ನೋಂದಾಯಿಸಿಕೊಂಡಿದ್ದು, 10 ಸಾವಿರಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿಸಿದ್ದಾರೆ.
ವೈದ್ಯಕೀಯ, ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲೆ, ನಿರ್ವಹಣೆ, ವಿಜ್ಞಾನ, ನರ್ಸಿಂಗ್, ಐಟಿಐ, ಡಿಪ್ಲೋಮಾ, ಪಿಯುಸಿ, ಎಸ್ಎಸ್ಎಲ್ಸಿ, ಅಂತಿಮ ಸೆಮಿಸ್ಟರ್ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.
ಐಟಿ ವಲಯದಲ್ಲಿ 207 ಸಾಫ್ಟ್ವೇರ್ ಇಂಜಿನಿಯರಿಂಗ್ ಹುದ್ದೆ ಸೇರಿದಂತೆ 20 ಕಂಪನಿಗಳಲ್ಲಿ 843 ಉದ್ಯೋಗಾವಕಾಶ ಇದೆ. ಯಾವುದೇ ಹಿನ್ನೆಲೆಯ ಪದವೀಧರರಿಗೆ ಅಮೆಜಾನ್ ಮತ್ತು ಟಿಸಿಎಸ್ ಕಂಪನಿಗಳು 400ಕ್ಕೂ ಅಧಿಕ ಉದ್ಯೋಗ ನೀಡಲಿವೆ. ಉತ್ಪಾದನಾ ವಲಯದಲ್ಲಿ 70,000ಕ್ಕೂ ಅಧಿಕ ಉದ್ಯೋಗದಾತರ 52 ಕಂಪನಿಗಳು ವಲಯದಲ್ಲಿವೆ.
ಬಿಎಫ್ಎಸ್ಐ ವಲಯದಲ್ಲಿ 28 ಕಂಪನಿಗಳಿಂದ 2300 ಹುದ್ದೆಗಳು, ಐಟಿಇಎಸ್ ವಲಯದಲ್ಲಿ 4000ಕ್ಕೂ ಅಧಿಕ ಉದ್ಯೋಗಗಳು, ಫಾರ್ಮಾದಲ್ಲಿ 700ಕ್ಕೂ ಅಧಿಕ ಉದ್ಯೋಗಗಳು, ಆರೋಗ್ಯ ವಲಯದಲ್ಲಿ 24 ಆರೋಗ್ಯ ಸಂಸ್ಥೆಗಳಿಂದ ಒಂದು ಸಾವಿರಕ್ಕೂ ಅಧಿಕ ಉದ್ಯೋಗಗಳು, ಮಾರಾಟ ವಲಯದಲ್ಲಿ 47 ಕಂಪನಿಗಳಿಂದ 3300 ಉದ್ಯೋಗಗಳು, ಮಾಧ್ಯಮ ವಲಯದಲ್ಲಿ 75 ಹೆಚ್ಚು ಖಾಲಿ ಹುದ್ದೆಗಳಿವೆ, ನಿರ್ಮಾಣ ವಲಯದಲ್ಲಿ 600ಕ್ಕೂ ಅಧಿಕ ಉದ್ಯೋಗ, ಆತಿಥ್ಯ ವಿಭಾಗದಲ್ಲಿ 12 ಕಂಪನಿಗಳಲ್ಲಿ 295 ಹುದ್ದೆಗಳಿವೆ.