ಹುಬ್ಬಳ್ಳಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಶನ್, ಧಾರವಾಡ ಮತ್ತು ವಿದ್ಯಾನಗರದ ಬಿ.ವಿ.ಬಿ ಆವರಣದಲ್ಲಿರುವ ಶ್ರೀಮತಿ ಸಿ.ಐ ಮುನವಳ್ಳಿ ಪಾಲಿಟೆಕ್ನಿಕ್ ಇವುಗಳ ಸಹಯೋಗದೊಂದಿಗೆ ಫೆಬ್ರವರಿ 28ರಂದು ಬೆಳಿಗ್ಗೆ 9 ಗಂಟೆಗೆ ವಿದ್ಯಾನಗರದ ಬಿ.ವಿ.ಬಿ ಆವರಣದಲ್ಲಿರುವ ಶ್ರೀಮತಿ ಸಿ.ಐ ಮುನವಳ್ಳಿ ಪಾಲಿಟೆಕ್ನಿಕ್ ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐಟಿಐ, ಡಿಪ್ಲೋಮಾ, ಬಿಇ, ಬಿಎ, ಬಿಕಾಂ ಇನ್ನಿತರೆ ಪದವಿ ಮತ್ತು ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ ಒಟ್ಟು 30ಕ್ಕೂ ಹೆಚ್ಚಿನ ಅಧಿಕ ಉದ್ಯೋಗದಾತರು ಭಾಗವಹಿಸಲಿದ್ದಾರೆ.
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು http://skillconnect.kaushalkar.com/candidatereg ಮತ್ತು ಕಂಪನಿಗಳು https://skillconnect.kaushalkar.com/employereg ಗೂಗಲ್ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದು. ಅಭ್ಯರ್ಥಿಗಳು ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.