alex Certify Job Cut: ಮತ್ತೆ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಬೈಜುಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Job Cut: ಮತ್ತೆ 1,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಮುಂದಾದ ಬೈಜುಸ್….!

ಭಾರತದ ಎಡ್-ಟೆಕ್ ಯೂನಿಕಾರ್ನ್ ಬೈಜುಸ್ (India’s ed-tech unicorn Byju’s ) ಮತ್ತೊಂದು ಸುತ್ತಿನ ಕೆಲಸ ಕಡಿತ(Job Cut)ಕ್ಕೆ ಮುಂದಾಗಿದ್ದು, ವೆಚ್ಚ ಕಡಿತ ಕಾರ್ಯತಂತ್ರದ ಭಾಗವಾಗಿ 1,000 ಉದ್ಯೋಗಿ(employees)ಗಳನ್ನು ವಜಾಗೊಳಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಆನ್-ಗ್ರೌಂಡ್ ಮಾರಾಟ ತಂಡಗಳ ಗುತ್ತಿಗೆ ಸಿಬ್ಬಂದಿ ಮತ್ತು ರಾಂಡ್ ಸ್ಟಾಡ್ ಮತ್ತು ಚಾನೆಲ್ ಪ್ಲೇನಂತಹ ಮೂರನೇ ಹಂತದ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆಯಿದೆ. 1.2 ಬಿಲಿಯನ್ ಡಾಲರ್ ಅವಧಿಯ ಸಾಲದ ಮೇಲೆ ಕಂಪನಿಯು ಸುಮಾರು 40 ಮಿಲಿಯನ್ ಡಾಲರ್ ತ್ರೈಮಾಸಿಕ ಬಡ್ಡಿ ಪಾವತಿಯನ್ನು ತಪ್ಪಿಸಿದೆ ಎಂದು ಬಹಿರಂಗವಾದ ಕೆಲವು ದಿನಗಳ ನಂತರ ಬೈಜು ತನ್ನ ಉದ್ಯೋಗಿಗಳನ್ನು ವಜಾಗೊಳಿಸುವ ಸುದ್ದಿ ಬಂದಿದೆ.

ಬೈಜುಸ್ ಕಳೆದ ಒಂದೂವರೆ ವರ್ಷಗಳಿಂದ ಬಿಗಿಯಾದ ಒತ್ತಡವನ್ನು ಅನುಭವಿಸುತ್ತಿದೆ. ಪೋಷಕರು ಮತ್ತು ಮಕ್ಕಳು ಆಫ್ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಕಂಪನಿಯ ಆನ್ಲೈನ್ ಕೋಚಿಂಗ್ ವ್ಯವಹಾರ ಮತ್ತು ಅದರ ಆಕರ್ಷಣೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ಕಡಿತದಲ್ಲಿ ತೊಡಗಿದೆ. ಈ ವರ್ಷದ ಫೆಬ್ರವರಿಯಲ್ಲಿ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ವಿಭಾಗಗಳಲ್ಲಿ ಸುಮಾರು 1,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...