ಕೊಪ್ಪಳ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಉದ್ಯೋಗದ ನೆರವಿಗಾಗಿ ಸ್ಕಿಲ್ ಕನೆಕ್ಟ್ ಎಂಬ ಅಧಿಕೃತ ವೆಬ್ ಪೋರ್ಟಲ್ ರಚಿಸಲಾಗಿದೆ.
ವಿದ್ಯಾರ್ಹತೆ ಅನುಸಾರವಾಗಿ ವಿವಿಧ ರೀತಿಯ ಕೌಶಲ್ಯ ಅನುಭವ ಹೊಂದಿರುವ ಅಭ್ಯರ್ಥಿಗಳು skillconnect.kaushalkar.com ನಲ್ಲಿ ನೋಂದಾಯಿಸಿಕೊಂಡು ಸದುಪಯೋಗ ಪಡೆದುಕೊಳ್ಳಲು ಅವಕಾಶವಿರುತ್ತದೆ. ಇದರಲ್ಲಿ ನೋಂದಾಯಿಸಿದ ಅಭ್ಯರ್ಥಿಗಳಿಗೆ ಉದ್ಯೋಗದ ಅವಕಾಶದ ಕುರಿತು ಕಂಪನಿಯವರು ನೇರವಾಗಿ ಅಭ್ಯರ್ಥಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯ ಜಿಲ್ಲಾ ಸಂಯೋಜಕರಾದ ಶರಣಪ್ಪ ತೊಂಡಿಹಾಳ, ಮೊ.ನಂ-9743839859 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.