alex Certify ಪಿಯುಸಿ, ಪದವೀಧರರಿಗೆ ಸಿಹಿ ಸುದ್ದಿ: ಉದ್ಯೋಗಕ್ಕಾಗಿ ನೇರ ಸಂದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಯುಸಿ, ಪದವೀಧರರಿಗೆ ಸಿಹಿ ಸುದ್ದಿ: ಉದ್ಯೋಗಕ್ಕಾಗಿ ನೇರ ಸಂದರ್ಶನ

ಕಲಬುರಗಿ: ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಕೆಳಕಂಡ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಇದೇ ಮೇ 13 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ.

ಕಲಬುರಗಿಯ ಪ್ರತಿಷ್ಠಿತ ಮೆಡ್‍ಪ್ಲಸ್ ಕಂಪನಿಯು ಈ ನೇರ ಸಂದರ್ಶನ ನಡೆಸುತ್ತಿದ್ದು, ಫಾರ್ಮಸಿಸ್ಟ್ 10 ಹುದ್ದೆಗಳಿಗೆ ಅಭ್ಯರ್ಥಿಗಳು ಡಿ-ಫಾರ್ಮಸಿ, ಬಿ-ಫಾರ್ಮಸಿ(ಎಸ್.ಪಿ.ಸಿ.) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿಗೆ ಯಾವುದೇ ಮಿತಿ ಇರುವುದಿಲ್ಲ.

ಫಾರ್ಮಸಿ ಎಡ್ (Pharmacy Aide)-25 ಹುದ್ದೆಗಳಿಗೆ ಅಭ್ಯರ್ಥಿಗಳು ಪಿ.ಯು.ಸಿ. ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿಗೆ ಯಾವುದೇ ಮಿತಿ ಇರುವುದಿಲ್ಲ.

ಅಪ್ರೆಂಟಿಸ್ 25 ಹುದ್ದೆಗಳಿಗೆ ಪಿ.ಯು.ಸಿ. ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು.

ಟೆರಿಟರಿ ಹೆಚ್.ಆರ್.-1 ಹುದ್ದೆಗೆ ಎಂ.ಬಿ.ಎ.(ಹೆಚ್.ಆರ್) ಪಾಸಾಗಿರಬೇಕು.(4 ವರ್ಷದ ಅನುಭವ ಇರಬೇಕು) ವಯೋಮಿತಿ 22 ರಿಂದ 30 ವರ್ಷದೊಳಗಿರಬೇಕು.

ಟೆರಿಟರಿ ಇನ್‍ಚಾರ್ಜ್ 1 ಹುದ್ದೆಗೆ ಬಿ.ಟೆಕ್ (ಸಿವಿಲ್), ಬಿ.ಇ.(ಸಿವಿಲ್) ಪಾಸಾಗಿರಬೇಕು. ವಯೋಮಿತಿ 21 ರಿಂದ 28 ವರ್ಷದೊಳಗಿರಬೇಕು.

ಕಾರ್ಪೆಂಟರ್ ಟೆಕ್ನಿಷಿಯನ್-1 ಹುದ್ದೆ, ಕಾರಪೆಂಟರ್ ಹೆಲ್ಪರ್-1 ಹುದ್ದೆ, ಎಲೆಕ್ಟ್ರಿಷಿಯನ್-1 ಹುದ್ದೆ, ಎಲೆಕ್ಟ್ರಿಷಿಯನ್ ಹೆಲ್ಪರ್-1 ಹುದ್ದೆ, ಎ.ಸಿ.ಟೆಕ್ನಿಷಿಯನ್-1 ಹುದ್ದೆ ಹಾಗೂ ಎ.ಸಿ. ಹೆಲ್ಪರ್-1 ಹುದ್ದೆಗಳಿಗೆ ಅಭ್ಯರ್ಥಿಗಳು ಐಟಿಐ ಪಾಸಾಗಿರಬೇಕು. ವಯೋಮಿತಿ 19 ರಿಂದ 28 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ (ರೆಸ್ಯೂಮ್) ಬಯೋಡಾಟಾ ಹಾಗೂ ಆಧಾರ್ ಕಾರ್ಡ್‍ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲ್ಲಿ ಭಾಗವಹಿಸಬೇಕು.

ಈ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಅಥವಾ 08472-274846ಗೆ ಸಂಪರ್ಕಿಸಲು ಕೋರಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...