alex Certify JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಏರ್’ಮ್ಯಾನ್ ಆಯ್ಕೆಗೆ ಜ.29 ರಿಂದ ನೇಮಕಾತಿ ರ್ಯಾಲಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ಏರ್’ಮ್ಯಾನ್ ಆಯ್ಕೆಗೆ ಜ.29 ರಿಂದ ನೇಮಕಾತಿ ರ್ಯಾಲಿ.!

ಶಿವಮೊಗ್ಗ : ಭಾರತೀಯ ವಾಯುಪಡೆಯು ಭಾರತದ/ಗೂರ್ಖಾ(ನೇಪಾಳ) ಪುರುಷ ಅಭ್ಯರ್ಥಿಗಳನ್ನು ಭಾರತೀಯ ವಾಯುಪಡೆಗೆ ಏರ್ಮ್ಯಾನ್ ಆಗಿ ಗ್ರೂಪ್ ‘ವೈ’(ತಾಂತ್ರಿಕವಲ್ಲದ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು ಜ.29 ರಿಂದ ಫೆ.06 ರವರೆಗೆ ನೇಮಕ ರ್ಯಾಲಿ ಏರ್ಪಡಿಸಿದೆ.

ನೇಮಕಾತಿ ರ್ಯಾಲಿಯನ್ನು ಮಹಾರಾಜ ಕಾಲೇಜು ಮೈದಾನ, ಪಿ ಟಿ ಉಷಾ ರಸ್ತೆ, ಶೆಣೈಸ್ ಎರ್ನಾಕುಲಂ, ಕೊಚ್ಚಿ, ಕೇರಳ 682011 ಇಲ್ಲಿ ಏರ್ಪಡಿಸಲಾಗಿದೆ.ಜ.29 ರಿಂದ 30 ರವರೆಗೆ ಗುಂಪು ವೈ/ ವೈದ್ಯಕೀಯ ಸಹಾಯಕರ ಹುದ್ದೆಗೆ, ವಿದ್ಯಾರ್ಹತೆ 10+2 ಅಭ್ಯರ್ಥಿಗಳು ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಎಲ್ಲಾ ಜಿಲ್ಲೆಗಳ ಅಭ್ಯರ್ಥಿಗಳು ಹಾಜರಾಗಬಹುದು.

ಫೆ.04 ರಿಂದ 05 ರವರೆಗೆ ಗುಂಪು ವೈ/ವೈದ್ಯಕೀಯ ಸಹಾಯಕ ಹುದ್ದೆ, ವಿದ್ಯಾರ್ಹತೆ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿಎಸ್ಸಿ ಹೊಂದಿರುವ ಅಭ್ಯರ್ಥಿಗಳು ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಎಲ್ಲಾ ಜಿಲ್ಲೆಗಳು ಮತ್ತು ಪುದುಚೇರಿ ಹಾಗೂ ಲಕ್ಷದ್ವೀಪಗಳು ಕೇಂದ್ರಾಡಳಿತ ಪ್ರದೇಶಗಳ ಅಭ್ಯರ್ಥಿಗಳು ಹಾಜರಾಗಬಹುದು.ವೈದ್ಯಕೀಯ ಸಹಾಯಕ ವೃತ್ತಿಗೆ 10+2 ಹೊಂದಿರುವ ಅಭ್ಯರ್ಥಿಗಳು ಅವಿವಾಹಿತರಾಗಿರೇಕು. ಮತ್ತು 2004 ರ ಜುಲೈ 03 ಮತ್ತು 2008 ಜುಲೈ 3 ರ ನಡುವೆ ಜನಿಸಿದವರಾಗಿರಬೇಕು. ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೊಮಾ/ಬಿಎಸ್ಸಿ ಹೊಂದಿರುವ ಅಭ್ಯರ್ಥಿಗಳು ಅವಿವಾಹಿತರಾಗಿದ್ದು 2001 ರ ಜುಲೈ 03 ಮತ್ತು 2006 ರ ಜುಲೈ 3 ರ ನಡುವೆ ಜನಿಸಿರಬೇಕು. ವಿವಾಹಿತ ಅಭ್ಯರ್ಥಿಗಳು 2001 ರ ಜುಲೈ 3 ಮತ್ತು 2004 ರ ಜುಲೈ 03 ರ ನಡುವೆ ಜನಿಸಿರಬೇಕು. ಹೆಚ್ಚಿನ ವಿವರಗಳಿಗೆ www.airmenselection.cdac.in ಗೆ ಲಾನ್ಇನ್ ಆಗಿ ಪಡೆಯಬಹುದೆಂದು ಉದ್ಯೋಗಾಧಿಕಾರಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...