ಬೆಂಗಳೂರು: ರಾಜ್ಯ ಸರ್ಕಾರದ ಅಧೀನದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಆಹ್ವಾನಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ನಡೆಸಲಾಗುವುದು. ಉಳಿಕೆ ಮೂಲ ವೃಂದ ಕಲ್ಯಾಣ ಕರ್ನಾಟಕ ಬ್ಯಾಕ್ಲಾಗ್ ಹುದ್ದೆಗಳು ಇವೆ. ಸಹಾಯಕ ವ್ಯವಸ್ಥಾಪಕರು, ತಾಂತ್ರಿಕ, ತಾಂತ್ರಿಕೇತರ ಸಹಾಯಕ ವ್ಯವಸ್ಥಾಪಕರು, ಗುಣಮಟ್ಟ ನಿರೀಕ್ಷಕರು, ಆಪ್ತ ಕಾರ್ಯದರ್ಶಿ, ಕಲ್ಯಾಣ ಅಧಿಕಾರಿ, ಕ್ಷೇತ್ರ ನಿರೀಕ್ಷಕ, ಎಫ್‌ಡಿಎ, ಎಸ್‌ಡಿಎ, ಮಾರಾಟ ಪ್ರತಿನಿಧಿ, ಸೇಲ್ಸ್ ಇಂಜಿನಿಯರ್, ಗುಮಾಸ್ತ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ 386, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 186, ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದಲ್ಲಿ 26, ಎಂಎಸ್ಐಎಲ್ ನಲ್ಲಿ 72 ಹುದ್ದೆಗಳಿವೆ.
ಜುಲೈ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಶುಲ್ಕ ಪಾವತಿಗೆ ಜುಲೈ 25 ಕೊನೆಯ ದಿನವಾಗಿದೆ. ವಿವರಗಳಿಗಾಗಿ http://kea.kar.nic.in ವೆಬ್ಸೈಟ್ ಗಮನಿಸಬಹುದಾಗಿದೆ. ಒಂದಕ್ಕಿಂತ ಹೆಚ್ಚಿನ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಪ್ರತಿ ಹುದ್ದೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಪ್ರತಿ ಹುದ್ದೆಗೂ ಪ್ರತ್ಯೇಕ ಶುಲ್ಕ ಪಾವತಿಸಬೇಕು. ನೇಮಕಾತಿಗೆ ಸಂಬಂಧಿಸಿದ ಹುದ್ದೆವಾರು, ವರ್ಗವಾರು ವರ್ಗೀಕರಣ, ವಯೋಮಿತಿ, ವಿದ್ಯಾರ್ಹತೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಗಮನಿಸಬಹುದಾಗಿದೆ.