ನವದೆಹಲಿ :ಎಸ್ಎಸ್ ಎಲ್ ಸಿ, ಐಟಿಐ ಪಾಸಾದವರಿಗೆ ಭರ್ಜರಿ ಸಿಹಿಸುದ್ದಿ, ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್ 30ರೊಳಗೆ ಅಧಿಕೃತ ವೆಬ್ ಸೈಟ್ ಮೂಲಕ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ರೈಲ್ವೆ ನೇಮಕಾತಿ ಕೋಶ (RRC) ದಕ್ಷಿಣ ರೈಲ್ವೆಯಲ್ಲಿ ಕೆಲಸ ಮಾಡಲು ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ 790 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
ಜೂನಿಯರ್ ಎಂಜಿನಿಯರ್
ಅಸಿಸ್ಟೆಂಟ್ ಲೋಕೋ ಪೈಲಟ್
ಟೆಕ್ನಿಷಿಯನ್ ಗ್ರೇಡ್-1
ಗ್ರೇಡ್-3 ಮತ್ತು ಗಾರ್ಡ್/ ಟ್ರೈನ್ ಮ್ಯಾನೇಜರ್.
ವಿದ್ಯಾರ್ಹತೆ
ಮೆಟ್ರಿಕ್ಯುಲೇಷನ್/ ಎಸ್ಎಸ್ಎಲ್ಸಿ/ ಐಟಿಐ/ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಸಂಬಂಧಪಟ್ಟ ಸ್ಪೆಷಲೈಸೇಶನ್ನಲ್ಲಿ ಪೂರ್ಣಗೊಳಿಸಿರಬೇಕು.
ವಯೋಮಿತಿ
42 ವರ್ಷ ಆಗಿರಬೇಕು.
ಆಯ್ಕೆ: ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rrcmas.in ವೆಬ್ಸೈಟ್ ಸಂಪರ್ಕಿಸಬಹುದು.