ಬೆಂಗಳೂರು : ರಾಜ್ಯದ ವಿವಿಧ ಕಡೆ 310 ‘ಅರಣ್ಯ ವೀಕ್ಷಕ’ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಇದೀಗ ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ.
ಈ ಪಟ್ಟಿಯಲ್ಲಿ ಹೆಸರು ಪಡೆದಿರುವವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ..? ಎಂಬ ಮಾಹಿತಿಯನ್ನು ಮುಂದೆ ಓದಿ.
ಚೆಕ್ ಮಾಡುವುದು ಹೇಗೆ..?
1)ಅರಣ್ಯ ಇಲಾಖೆಯ ನೇಮಕಾತಿ ಪೋರ್ಟಲ್ https://kfdrecruitment.in/ ಗೆ ಭೇಟಿ ನೀಡಿ.
2) ವೆಬ್ ಪೇಜ್ ನಲ್ಲಿ ‘ಮುಖಪುಟ’ ಎಂದಿರುವ ಕಾಲಂ ಅಡಿಯಲ್ಲಿ ಗಮನಿಸಿ.
3)ಇತ್ತೀಚೆಗೆ ಬಿಡುಗಡೆ ಮಾಡಿದ ಅರ್ಹತಾ ಪಟ್ಟಿಗಳು ಇರುತ್ತವೆ.
4)ನೀವು ಅರ್ಜಿ ಸಲ್ಲಿಸಿದ ಅರಣ್ಯ ವೃತ್ತದ ಅರ್ಹತಾ ಪಟ್ಟಿ ಮೇಲೆ ಕ್ಲಿಕ್ ಮಾಡಿ, ಅರ್ಹತಾ ಪಟ್ಟಿ ಚೆಕ್ ಮಾಡಿಕೊಳ್ಳಿ
ಯಾವುದಾದರೂ ಆಕ್ಷೇಪಣೆ ಇದ್ದಲ್ಲಿ,ಇ-ಮೇಲ್ ವಿಳಾಸ- “cfbangalore.hg@gmail.com’ ಗೆ ಸಂದೇಶ ಕಳುಹಿಸುವ ಮೂಲಕ ಅಥವಾ ಸ್ಪೀಡ್ ಪೋಸ್ಟ್ / ರಿಜಿಸ್ಟರ್ ಪೋಸ್ಟ್ ಮೂಲಕ 20-02-2024 ಸಂಜೆ 05-30 ಗಂಟೆಯೊಳಗೆ ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಬೇಕಾದ ವಿಳಾಸ : ಆಯಾ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ ರವರ ಕಛೇರಿ.
ಹುದ್ದೆಗಳ ವಿವರ
ಬೆಂಗಳೂರು ವೃತ್ತ : 33
ಬೆಳಗಾವಿ ವೃತ್ತ : 20
ಬಳ್ಳಾರಿ ವೃತ್ತ: 20
ಚಾಮರಾಜನಗರ ವೃತ್ತ: 32
ಚಿಕ್ಕಮಗಳೂರು ವೃತ್ತ: 25
ಧಾರವಾಡ ವೃತ್ತ: 7
ಹಾಸನ ವೃತ್ತ: 20
ಕೆನರಾ ವೃತ್ತ: 32
ಕೊಡಗು ವೃತ್ತ: 16
ಕಲಬುರ್ಗಿ ವೃತ್ತ: 23
ಮಂಗಳೂರು ವೃತ್ತ: 20
ಮೈಸೂರು ವೃತ್ತ: 32
ಶಿವಮೊಗ್ಗ ವೃತ್ತ: 30
ಒಟ್ಟು : 310
ವೇತನ ಶ್ರೇಣಿ:- ರೂ.18,000 ದಿಂದ ರೂ.32,600
.