ಕೇಂದ್ರ ಸರ್ಕಾರವು ರೈಲ್ವೆಗೆ ಸಂಬಂಧಿಸಿದ ಹೊಸ ಹುದ್ದೆಗಳನ್ನು ಕಾಲಕಾಲಕ್ಕೆ ಬಿಡುಗಡೆ ಮಾಡುತ್ತಿರುವುದನ್ನು ನಾವು ನೋಡಿದ್ದೇವೆ. ದೆಹಲಿಯ ರೈಲ್ವೆ ನೇಮಕಾತಿ ಕೋಶವು ಉತ್ತರ ರೈಲ್ವೆಯ ವಿಭಾಗ ಮತ್ತು ಕಾರ್ಯಾಗಾರ ಘಟಕಗಳಲ್ಲಿ ಆಕ್ಟ್ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಈ ಅಧಿಸೂಚನೆಯ ಮೂಲಕ ಒಟ್ಟು 4,096 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 16 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಸಂಪೂರ್ಣ ವಿವರಗಳಿಗಾಗಿ https://www.rrcnr.org/ ವೆಬ್ಸೈಟ್ಗೆ ಭೇಟಿ ನೀಡಬಹುದು.
ಒಟ್ಟು ಹುದ್ದೆಗಳು: 4,096
ಶೈಕ್ಷಣಿಕ ಅರ್ಹತೆ: 10 ನೇ ವಿದ್ಯಾರ್ಹತೆ ಜೊತೆಗೆ ಸಂಬಂಧಿತ ಟ್ರೇಡ್ನಲ್ಲಿ ಐಟಿಐ ಉತ್ತೀರ್ಣರಾಗಿರಬೇಕು.
ಆರ್ಆರ್ಸಿ ಕಾರ್ಯಾಗಾರಗಳು: ಕ್ಲಸ್ಟರ್ ದೆಹಲಿ, ಕ್ಲಸ್ಟರ್ ಫಿರೋಜ್ಪುರ, ಕ್ಲಸ್ಟರ್ ಲಕ್ನೋ, ಕ್ಲಸ್ಟರ್ ಅಂಬಾಲಾ, ಕ್ಲಸ್ಟರ್ ಮೊರಾದಾಬಾದ್ ಮತ್ತು ಇತರ ಕಾರ್ಯಾಗಾರಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಟ್ರೇಡ್ಗಳು: ಡೇಟಾ ಎಂಟ್ರಿ ಆಪರೇಟರ್, ರೆಫ್ರಿಜರೇಟರ್ ಮತ್ತು ಎಸಿ ಮೆಕ್ಯಾನಿಕ್, ಟರ್ಮಿನಲ್, ಮೆಕ್ಯಾನಿಕಲ್, ಎಲೆಕ್ಟ್ರಿಷಿಯನ್, ಫಿಟ್ಟರ್, ಕಾರ್ಪೆಂಟರ್, ಎಂಎಂವಿ, ಫೋರ್ಜರ್ ಮತ್ತು ಹೀಟ್ ಟ್ರೀಟರ್, ವೆಲ್ಡರ್, ಮೆಷಿನಿಸ್ಟ್, ಟ್ರಿಮ್ಮರ್, ಕ್ರೇನ್ ಆಪರೇಟರ್, ಸ್ಟೆನೋಗ್ರಾಫರ್ ಮತ್ತು ಇತರ ಟ್ರೇಡ್ಗಳು.
16.09.2024ಕ್ಕೆ ಅನ್ವಯವಾಗುವಂತೆ 15 ರಿಂದ 24 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: 10ನೇ ತರಗತಿ, ಐಟಿಐ ಅಂಕಗಳು, ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 100 ನಿಗದಿ ಮಾಡಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ https://www.rrcnr.org/ ವೆಬ್ಸೈಟ್ ಭೇಟಿ ನೀಡಬಹುದಾಗಿದೆ.s
.