ಬೆಂಗಳೂರು : 2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರುಗಳ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
2023-24ನೇ ಸಾಲಿಗೆ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಗಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು, 1997ರಡಿ ಈ ಕೆಳಕಂಡ ವೃಂದಗಳಲ್ಲಿನ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳ ರಿಕ್ತ ಸ್ನಾನಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳಂತೆ ವರ್ಗೀಕರಣ ಮಾಡಿ ಅನುಬಂಧ-1 ರಿಂದ 22ಎ ರವರೆಗೆ ಲಗತ್ತಿಸಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಬಿಡುಗಡೆ ಮಾಡಲಾಗಿದೆ.
ಗ್ರೂಪ್-ಎ ಕೆಎಎಸ್ ಖಾಲಿ ಹುದ್ದೆಗಳ ವಿವರ
1. ಸಹಾಯಕ ಆಯುಕ್ತರು(ಕಿರಿಯ ಶ್ರೇಣಿ), ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ – 40 ಹುದ್ದೆ
2. ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ – 41 ಹುದ್ದೆ
3. ಸಹಾಯಕ ನಿರ್ದೇಶಕರು, ಖಜಾನೆ ಇಲಾಖೆ – 02
4. ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 40 ಹುದ್ದೆ
5. ಡಿವೈಎಸ್ಪಿ, ಒಳಾಡಳಿತ ಇಲಾಖೆ – 09
6. ಸಹಾಯಕ ನಿರ್ದೇಶಕರು ಗ್ರೇಡ್-1, ಸಮಾಜ ಕಲ್ಯಾಣ ಇಲಾಖೆ – 20 ಹುದ್ದೆ
7. ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ, ಸಹಾಯಕ ನಿರ್ದೇಶಕರು, ಪ್ರಾಂಶುಪಾಲರು(ಪಿಇಟಿಸಿ), ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ – 07
8. ಒಟ್ಟು ಹುದ್ದೆಗಳ ಸಂಖ್ಯೆ ಉಳಿಕೆ ಮೂಲ ವೃಂದದ ರಿಕ್ತ ಸ್ತಾನ 123, ಕಲ್ಯಾಣ ಕರ್ನಾಟಕ ವೃಂದದ ರಿಕ್ತ ಸ್ಥಾನಗಳು 36 ಸೇರಿದಂತೆ 159 ಹುದ್ದೆಗಳು.
ಗ್ರೂಪ್-ಬಿ ಕೆಎಎಸ್ ಖಾಲಿ ಹುದ್ದೆಗಳ ವಿವರ
1. ತಹಶೀಲ್ದಾರ್ (ಗ್ರೇಡ್-2), ಕಂದಾಯ ಇಲಾಖೆ – 51
2. ವಾಣಿಜ್ಯ ತೆರಿಗೆ ಅಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆ -59
3. ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ – 04
4. ಸಹಾಯಕ ಅಧೀಕ್ಷಕರು, ಒಳಾಡಳಿತ ಇಲಾಖೆ(ಕಾರಾಗೃಹ) -03
5. ಸಹಾಯಕ ಸಂಘಗಳ ಸಹಾಯಕ ನಿಬಂಧಕರು, ಸಹಕಾರ ಇಲಾಖೆ – 12
6. ಅಬಕಾರಿ ಉಪ ಅಧೀಕ್ಷಕರು, ಆರ್ಥಿಕ ಇಲಾಖೆ(ಅಬಕಾರಿ) – 10
7. ಉದ್ಯೋಗಾಧಿಕಾರಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲ ಮತ್ತು ಜಿವನೋಪಾಯ ಇಲಾಖೆ – 03
8. ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ – 04
9. ಮುಖ್ಯಾಧಿಕಾರಿ (ಗ್ರೇಡ್-1), ನಗರಾಭಿವೃದ್ಧಿ ಇಲಾಖೆ – 01
10. ಸಹಾಯಕ ಖಜಾನಾಧಿಕಾರಿ, ಆರ್ಥಿಕ ಇಲಾಖೆ(ಖಜಾನೆ) – 46
11. ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ – 02
12. ಶಾಖಾಧಿಕಾರಿ, ಕರ್ನಾಟಕ ಸರ್ಕಾರದ ಸಚಿವಾಲಯ – 05
13. ಸಹಾಯಕ ನಿರ್ದೇಶಕರು (ಗ್ರೇಡ್-2), ಸಮಾಜ ಕಲ್ಯಾಣ ಇಲಾಖೆ – 07
14. ಒಟ್ಟು ಉಳಿಕೆ ವೃಂದದ 184 ಹುದ್ದೆ, ಕಲ್ಯಾಣ ಕರ್ನಾಟಕ ವೃಂದದ 41 ಸೇರಿದಂತೆ 225 ಹುದ್ದೆಗಳು.
![](https://kannadadunia.com/wp-content/uploads/2024/02/WhatsApp-Image-2024-02-03-at-5.33.21-AM-1.jpeg)
![](https://kannadadunia.com/wp-content/uploads/2024/02/WhatsApp-Image-2024-02-03-at-5.33.21-AM.jpeg)