ದೇಶಾದ್ಯಾಂತ ಇರುವ ಪೋಸ್ಟ್ ಆಫೀಸುಗಳಲ್ಲಿ ಖಾಲಿಯಾಗಿ ಇರುವ 48 ಸಾವಿರ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್, ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಜನವರಿ 29ರಂದು ನೋಟಿಫಿಕೇಶನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಹೌದು, ಅಂಚೆ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂಬುದು ನಿಮ್ಮ ಗುರಿಯಾಗಿದ್ರೆ ಜ.29 ರಂದು ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರತಿವರ್ಷ ಎರಡು ಬಾರಿ ಖಾಲಿ ಹುದ್ದೆಗಳನ್ನು ಪೋಸ್ಟಲ್ ಇಲಾಖೆ ಭರ್ತಿ ಮಾಡುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಿದ ನೋಟಿಫಿಕೇಶನ್ ಮೂಲಕ ಭರ್ತಿ ಆಗದ ಉಳಿದ ಉದ್ಯೋಗಗಳೊಂದಿಗೆ ಖಾಲಿಯಾಗಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಿದ್ದಾರೆ.
10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್ಸಿ, ಎಸ್ಟಿ, ಒಬಿಸಿ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇದೆ. 10 ನೇ ತರಗತಿಯಲ್ಲಿ ಪಡೆದ ಅಂಕಗಳು (ಗ್ರೇಡ್) ಮತ್ತು ಮೀಸಲಾತಿ ನಿಯಮದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಸ್ಸಿ, ಎಸ್ಟಿ, ಅಂಗವಿಕಲ ಮತ್ತು ಮಹಿಳೆಯರಿಗೆ ಯಾವುದೇ ಪರೀಕ್ಷಾ ಶುಲ್ಕವಿರುವುದಿಲ್ಲ. ಉಳಿದ ಅಭ್ಯರ್ಥಿಗಳು 100 ರೂ.ಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. ರಾಜ್ಯವಾರು ಖಾಲಿ ಇರುವ ಹುದ್ದೆಗಳ ವಿವರಗಳನ್ನು ಅಂಚೆ ಇಲಾಖೆ ಪ್ರಕಟಿಸಲಿದೆ.