ಕಲಬುರಗಿ : ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ಆಡಳಿತ ಬಲವರ್ಧನೆಗಾಗಿ “ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್” ಘೋಷಣೆ ಮಾಡಿದ್ದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪ್ರತಿ ತಾಲೂಕಿಗೆ ಒಬ್ಬರಂತೆ ಒಟ್ಟು 51 ಫೆಲೋಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವರು ಪ್ರಬುದ್ಧ ಸಮಾಜ ನಿರ್ಮಿಸುವಲ್ಲಿ ನಮ್ಮ ಪ್ರಯತ್ನ ನಿರಂತರವಾಗಿರಲಿದ್ದು, ನಿಮ್ಮೆಲ್ಲರ ಸಲಹೆ ಸಹಕಾರ ನಮಗೆ ದೊಡ್ಡ ಶಕ್ತಿ ನೀಡಿದೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಜೊತೆಗೆ ನಾಡಿನ ಜನರ ವಿಶ್ವಾಸವನ್ನು ಉಳಿಸಿಕೊಂಡು ನುಡಿದಂತೆ ನಡೆಯುತ್ತಿದ್ದೇವೆ ಎಂದಿದ್ದಾರೆ.
ಕಲಬುರಗಿ ಜಿಲ್ಲೆಯ 1,44,496 ರೈತರಿಗೆ ₹28.67 ಕೋಟಿ ಬೆಳೆ ನಷ್ಟ ಪರಿಹಾರ ಮಂಜೂರು ಮಾಡಲಾಗಿದ್ದು, ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಲಾಗಿದೆ. ಕಲಬುರಗಿ ನಗರದಲ್ಲಿ 2022-23ನೇ ಸಾಲಿನಲ್ಲಿ ಕೆಕೆಆರ್ಡಿಬಿ ಮೆಗಾ ಮ್ಯಾಕ್ರೋ ಅನುದಾನಡಿಯಲ್ಲಿ ಒಟ್ಟು 39 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ₹18 ಲಕ್ಷ ವೆಚ್ಚದಲ್ಲಿ ವಿಶೇಷ ಸೌಲಭ್ಯವುಳ್ಳ ಅಂಗನವಾಡಿ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿ ಕಚೇರಿಯ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಪತ್ರ ಸೇರಿದಂತೆ ಒಂದೇ ಸೂರಿನಡಿ ಬರೋಬ್ಬರಿ 72 ಸೇವೆಗಳು ದೊರೆಯುವಂತೆ ಅವಕಾಶ ನೀಡಲಾಗಿದೆ.ವಿಶ್ವಗುರು ಬಸವಣ್ಣ ನವರನ್ನು “ಕರ್ನಾಟಕದ ಸಾಂಸ್ಕೃತಿಕ ನಾಯಕ” ರೆಂದು ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಸಚಿವ ಸಂಪುಟದಲ್ಲಿ ಈ ಮನವಿಗೆ ಸಮ್ಮತಿ ದೊರೆತಿದೆ ಎಂದರು.
51 ಫೆಲೋಗಳ ನೇಮಕಾತಿ
ಅರ್ಹತೆಗಳು
* ವಯಸ್ಸು 32 ವರ್ಷಕ್ಕಿಂತ ಕಡಿಮೆ ಇರಬೇಕು
* ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು
* ಕಲ್ಯಾಣ ಕರ್ನಾಟಕ ಜಿಲ್ಲೆಗಳ ಪ್ರತಿ ತಾಲೂಕಿಗೆ ಒಬ್ಬ ಫೆಲೋಗಳಂತೆ ಒಟ್ಟು 51 ಫೆಲೋಗಳ ನೇಮಕಾತಿ ಮಾಡಿಕೊಳ್ಳಲಾಗುವುದು
ಸಂಭಾವನೆ
ಪ್ರಯಾಣ ಭತ್ಯೆ ಸೇರಿ 61,500
ಅರ್ಹತೆಯ ಮಾನದಂಡಗಳು
ಕನ್ನಡ ಭಾಷಾಜ್ಞಾನ ಕಡ್ಡಾಯ (ಮಾತನಾಡುವುದು, ಓದುವುದು ಮತ್ತು ಬರೆಯುವುದು)
1-2 ವರ್ಷಗಳ ಕ್ಷೇತ್ರ ಅನುಭವ ಹೊಂದಿರುವ ಪದವೀಧರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
ಕ್ಷೇತ್ರದ ಅನುಭವ ಹೊಂದಿರುವ ಸ್ನಾತಕ ಪದವೀಧರರಿಗೆ ಆದ್ಯತೆ (M.phil & D.Phil ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ರವಿದೆ)
ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ತಾಲೂಕಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು
ಆಯ್ಕೆಯ ವಿಧಾನ
ಕಾರ್ಯಾವಧಿ 2 ವರ್ಷಗಳು
ಫೆಲೋಗಳನ್ನು ಅರ್ಹತೆಯ ಆಧಾರದ ಮೇಲೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.