ನವದೆಹಲಿ : ರೈಲ್ವೆ ನೇಮಕಾತಿ ಕೋಶ (RRC) ದಕ್ಷಿಣ ರೈಲ್ವೆಯಲ್ಲಿ ಕೆಲಸ ಮಾಡಲು ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ 790 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ
ಜೂನಿಯರ್ ಎಂಜಿನಿಯರ್, ಅಸಿಸ್ಟೆಂಟ್ ಲೋಕೋ ಪೈಲಟ್, ಟೆಕ್ನಿಷಿಯನ್ ಗ್ರೇಡ್-1, ಗ್ರೇಡ್-3 ಮತ್ತು ಗಾರ್ಡ್/ ಟ್ರೈನ್ ಮ್ಯಾನೇಜರ್.
ವಿದ್ಯಾರ್ಹತೆ
ಮೆಟ್ರಿಕ್ಯುಲೇಷನ್/ ಎಸ್ಎಸ್ಎಲ್ಸಿ/ ಐಟಿಐ/ ಇಂಜಿನಿಯರಿಂಗ್ ಡಿಪ್ಲೊಮಾವನ್ನು ಸಂಬಂಧಪಟ್ಟ ಸ್ಪೆಷಲೈಸೇಶನ್ನಲ್ಲಿ ಪೂರ್ಣಗೊಳಿಸಿರಬೇಕು.
ವಯೋಮಿತಿ
42 ವರ್ಷ ಆಗಿರಬೇಕು.
ಆಯ್ಕೆ: ಸಾಮಾನ್ಯ ಇಲಾಖಾ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rrcmas.in ವೆಬ್ಸೈಟ್ ಸಂಪರ್ಕಿಸಬಹುದು.