ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್ (ಎಚ್ಎಸ್ಎಫ್ಸಿ) ವಿವಿಧ ರೀತಿಯ ಉದ್ಯೋಗಗಳನ್ನು ಖಾಯಂ ಆಗಿ ಭರ್ತಿ ಮಾಡಲು ಅರ್ಹ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಮೆಡಿಕಲ್ ಆಫೀಸರ್ – ಎಸ್ಡಿ (ಏವಿಯೇಷನ್ ಅಥವಾ ಸ್ಪೋರ್ಟ್ಸ್), ಮೆಡಿಕಲ್ ಆಫೀಸರ್ – ಎಸ್ಸಿ, ಸೈಂಟಿಸ್ಟ್ ಅಥವಾ ಎಂಜಿನಿಯರ್ – ಎಸ್ಸಿ, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟೆಕ್ನಿಷಿಯನ್ – ಬಿ, ಡ್ರಾಫ್ಟ್ಸ್ಮನ್ – ಬಿ, ಅಸಿಸ್ಟೆಂಟ್ (ರಾಜಭಾಷಾ) ಹುದ್ದೆಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿದ ಅಧಿಸೂಚನೆಯ ಮೂಲಕ ಭರ್ತಿ ಮಾಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 9 ಕೊನೆಯ ದಿನವಾಗಿದೆ.
ಈ ನೇಮಕಾತಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿವರಗಳು ಈ ಕೆಳಗಿನಂತಿವೆ.
ಅಧಿಸೂಚನೆಯನ್ನು ಬಿಡುಗಡೆ ಮಾಡಿದ ಸಂಸ್ಥೆ: ಈ ಅಧಿಸೂಚನೆಯನ್ನು ಇಸ್ರೋ – ಎಚ್ಎಸ್ಎಫ್ಸಿಯಿಂದ ಬಿಡುಗಡೆ ಮಾಡಲಾಗಿದೆ.
ಭರ್ತಿ ಮಾಡಬೇಕಾದ ಹುದ್ದೆಗಳು: ಮೆಡಿಕಲ್ ಆಫೀಸರ್ – ಎಸ್ಡಿ (ಏವಿಯೇಷನ್ ಅಥವಾ ಸ್ಪೋರ್ಟ್ಸ್), ಮೆಡಿಕಲ್ ಆಫೀಸರ್ – ಎಸ್ಸಿ, ಸೈಂಟಿಸ್ಟ್ ಅಥವಾ ಎಂಜಿನಿಯರ್ – ಎಸ್ಸಿ, ಟೆಕ್ನಿಕಲ್ ಅಸಿಸ್ಟೆಂಟ್, ಸೈಂಟಿಫಿಕ್ ಅಸಿಸ್ಟೆಂಟ್, ಟೆಕ್ನಿಷಿಯನ್ – ಬಿ, ಡ್ರಾಫ್ಟ್ಸ್ಮನ್ – ಬಿ, ಅಸಿಸ್ಟೆಂಟ್ (ರಾಜಭಾಷಾ)
ಒಟ್ಟು ಹುದ್ದೆಗಳ ಸಂಖ್ಯೆ: 103
ಹುದ್ದೆವಾರು ಖಾಲಿ ಹುದ್ದೆಗಳ ಸಂಖ್ಯೆ ಈ ಕೆಳಗಿನಂತಿದೆ
ಮೆಡಿಕಲ್ ಆಫೀಸರ್ ಎಸ್ಡಿ (ಏವಿಯೇಷನ್ ಅಥವಾ ಸ್ಪೋರ್ಟ್ಸ್) – 02
ಮೆಡಿಕಲ್ ಆಫೀಸರ್ ಎಸ್ಸಿ – 01
ಸೈಂಟಿಸ್ಟ್ ಅಥವಾ ಎಂಜಿನಿಯರ್ ಎಸ್ಸಿ – 10
ಟೆಕ್ನಿಕಲ್ ಅಸಿಸ್ಟೆಂಟ್ – 28
ಸೈಂಟಿಫಿಕ್ ಅಸಿಸ್ಟೆಂಟ್ – 01
ಟೆಕ್ನಿಷಿಯನ್ ಬಿ – 43
ಡ್ರಾಫ್ಟ್ಸ್ಮನ್ ಬಿ – 13
ಅಸಿಸ್ಟೆಂಟ್ (ರಾಜಭಾಷಾ)- 05
ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ 10ನೇ ತರಗತಿ+ಐಟಿಐ, ಡಿಪ್ಲೊಮಾ, ಬಿಇ/ಬಿಟೆಕ್, ಎಂಇ/ಎಂಟೆಕ್ ವಿದ್ಯಾರ್ಹತೆ ಹೊಂದಿರಬೇಕು.
ಕನಿಷ್ಠ ವಯಸ್ಸು: ಕನಿಷ್ಠ 18 ವರ್ಷ ವಯಸ್ಸಿನವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಗರಿಷ್ಠ ವಯಸ್ಸು: ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ 35 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
ವಯೋಮಿತಿಯಲ್ಲಿ ಸಡಿಲಿಕೆ: ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ಸಡಿಲಿಕೆ ಅನ್ವಯಿಸುತ್ತದೆ.
ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 10 ವರ್ಷ ಸಡಿಲಿಕೆ ಇರುತ್ತದೆ.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 19-09-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 09-10-2024
ಅರ್ಜಿ ಪ್ರಕ್ರಿಯೆ: ಈ ಹುದ್ದೆಗಳಿಗೆ ಅರ್ಹರಾದವರು ಅಧಿಕೃತ ವೆಬ್ಸೈಟ್ನಲ್ಲಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.