ನವದೆಹಲಿ: ಭಾರತೀಯ ವಾಯುಪಡೆಯಲ್ಲಿ ಅಗ್ನಿವೀರ್ (ಅಗ್ನಿವೀರ್ ವಾಯು) 3500 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ವಯೋಮಿತಿ
ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿಯು ಕನಿಷ್ಠ ವಯೋಮಿತಿ 17.5
ವರ್ಷಗಳ ಮತ್ತು ಗರಿಷ್ಠ ವಯೋಮಿತಿ 21 ವರ್ಷಗಳು ಆಗಿರುತ್ತದೆ.ಅಗ್ನಿವೀರ್ ಹುದ್ದೆಗೆ ಒಟ್ಟು 3500 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಮೂರು ಹಂತಗಳನ್ನು ಕೂಡ ಇದು ಒಳಗೊಂಡಿದೆ: ಹಂತ 1 (ಆನ್ಲೈನ್ ಲಿಖಿತ ಪರೀಕ್ಷೆ), ಹಂತ 2 (DV, ದೈಹಿಕ ಸಾಮರ್ಥ್ಯ ಪರೀಕ್ಷೆ, ಹೊಂದಿಕೊಳ್ಳುವಿಕೆ ಪರೀಕ್ಷೆ), ಮತ್ತು ಹಂತ 3 (ವೈದ್ಯಕೀಯ ಪರೀಕ್ಷೆ) ಅಂತ ತಿಳಿಸಲಾಗಿದೆ.
ಆಯ್ಕೆ ವಿಧಾನ
ಆನ್ಲೈನ್ ಪರೀಕ್ಷೆ
• ದೈಹಿಕ ಸಾಮರ್ಥ್ಯ ಪರೀಕ್ಷೆ
• ವೈದ್ಯಕೀಯ ಪರೀಕ್ಷೆ
ಶೈಕ್ಷಣಿಕ ಅರ್ಹತೆ ಏನು..?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿಯಲ್ಲಿ ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.
ಅಥವಾ 50% ಅಂಕಗಳೊಂದಿಗೆ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಹೊಂದಿರುವವರುಅಥವಾ ಭೌತಶಾಸ್ತ್ರ ಮತ್ತು ಗಣಿತದಂತಹ ಎರಡು ವೃತ್ತಿಪರವಲ್ಲದ ವಿಷಯಗಳೊಂದಿಗೆ ಶೇಕಡಾ 50 ಕ್ಕಿಂತ ಕಡಿಮೆ ಅಂಕಗಳೊಂದಿಗೆ ಎರಡು ವರ್ಷಗಳ ವೃತ್ತಿಪರ ಕೋರ್ಸ್ ಮುಗಿಸಿರಬೇಕು. ಅಭ್ಯರ್ಥಿಗಳು 12 ನೇ ತರಗತಿಯಲ್ಲಿ ಯಾವುದೇ ವಿಷಯದಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು ಮತ್ತು ಇಂಗ್ಲಿಷ್ ನಲ್ಲಿ ಕನಿಷ್ಠ 50 ಪ್ರತಿಶತ ಅಂಕಗಳನ್ನು ಪಡೆದಿರಬೇಕು.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ. ಅಂದರೆ, ಅಭ್ಯರ್ಥಿಯು ಜೂನ್ 27, 2003 ಮತ್ತು ಡಿಸೆಂಬರ್ 27, 2006 ರ ನಡುವೆ ಜನಿಸಿರಬೇಕು.ಪುರುಷ ಅಭ್ಯರ್ಥಿಯ ಉದ್ದ ಕನಿಷ್ಠ 152.5 ಸೆಂ.ಮೀ ಮತ್ತು ಮಹಿಳಾ ಅಭ್ಯರ್ಥಿಯ ಉದ್ದ ಕನಿಷ್ಠ 152 ಸೆಂ.ಮೀ ಇರಬೇಕು.
ಅಭ್ಯರ್ಥಿಗಳನ್ನು ಈ ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಆಸಕ್ತರು https://agnipathvayu.cdac.in/avreg/candidate/login ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭಿಕ ದಿನಾಂಕ – 17 ಜನವರಿ 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 06 ಫೆಬ್ರವರಿ 2024