ನವದೆಹಲಿ : ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ) ಸಹಾಯಕ ಲೋಕೋ ಪೈಲಟ್ (ಎಎಲ್ಪಿ) ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 19, 2024 ಕೊನೆಯ ದಿನಾಂಕವಾಗಿದೆ.
ಆಸಕ್ತ ಅಭ್ಯರ್ಥಿಗಳು ಭಾರತೀಯ ರೈಲ್ವೆ ನೇಮಕಾತಿ 2024 ಗಾಗಿ rrbcdg.gov.in ಅಧಿಕೃತ ಪೋರ್ಟಲ್ ನಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ಮಾಹಿತಿಗಳು
ಪೋಸ್ಟ್ : ಅಸಿಸ್ಟೆಂಟ್ ಲೋಕೋ ಪೈಲಟ್ಸ್ (ಎಎಲ್ಪಿ)
ಸಂಘಟಕ : ರೈಲ್ವೆ ನೇಮಕಾತಿ ಮಂಡಳಿ (ಆರ್ಆರ್ಬಿ)
ಹುದ್ದೆಗಳು : 5696
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಫೆಬ್ರವರಿ 19, 2024
ಅಪ್ಲಿಕೇಶನ್ ಮೋಡ್ : ಆನ್ ಲೈನ್
ಅರ್ಜಿ ಶುಲ್ಕ: 500 ರೂ.
ಅಧಿಕೃತ ಪೋರ್ಟಲ್: rrbcdg.gov.in
ಅರ್ಜಿ ಸಲ್ಲಿಸುವುದು ಹೇಗೆ ?
ಹಂತ 1: ಆರ್ಆರ್ಬಿಯ ಅಧಿಕೃತ ಪೋರ್ಟಲ್ ಅನ್ನು rrbcdg.gov.in ನಲ್ಲಿ ತೆರೆಯಿರಿ
ಹಂತ 2: ಮುಖಪುಟದಲ್ಲಿ ಆರ್ಆರ್ಬಿ ಎಎಲ್ಪಿ ನೋಂದಣಿ ಲಿಂಕ್ ಹುಡುಕಿ
ಹಂತ 3: ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಆರ್ಆರ್ಬಿ ಎಎಲ್ಪಿ ಅರ್ಜಿ ನಮೂನೆ ತೆರೆಯುತ್ತದೆ
ಹಂತ 4: ವೈಯಕ್ತಿಕ ಮತ್ತು ಶೈಕ್ಷಣಿಕ ಎಲ್ಲಾ ವಿವರಗಳೊಂದಿಗೆ ಆರ್ಆರ್ಬಿ ಎಎಲ್ಪಿ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ
ಹಂತ 5: ಛಾಯಾಚಿತ್ರ ಮತ್ತು ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹಂತ 6: ಅರ್ಜಿ ನಮೂನೆಯನ್ನು ಸಲ್ಲಿಸಿ
ಹಂತ 7: ಆರ್ಆರ್ಬಿ ಎಎಲ್ಪಿ ಅಪ್ಲಿಕೇಶನ್ ದೃಢೀಕರಣ ಪುಟವನ್ನು ಡೌನ್ಲೋಡ್ ಮಾಡಿ
ಹಂತ 8: ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
ನೋಂದಣಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆರ್ಆರ್ಬಿ ಎಎಲ್ಪಿ ಅರ್ಜಿ ಶುಲ್ಕ ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ಮಹಿಳಾ, ಇಬಿಸಿ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ 250 ರೂ. ಇದೆ.
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ಡಾಕ್ಯುಮೆಂಟ್ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಎಲ್ಲಾ ಸುತ್ತುಗಳನ್ನು ಪೂರ್ಣಗೊಳಿಸಿದ ನಂತರ ಆರ್ಆರ್ಬಿ ಎಎಲ್ಪಿ ಮೆರಿಟ್ ಪಟ್ಟಿ 2024 ಅನ್ನು ಬಿಡುಗಡೆ ಮಾಡಲಾಗುತ್ತದೆ.