alex Certify JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ ; ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಆ.5 ರಂದು ನೇರ ಸಂದರ್ಶನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ಉದ್ಯೋಗಾಂಕ್ಷಿಗಳ ಗಮನಕ್ಕೆ ; ಅಂಚೆ ಇಲಾಖೆಯ ಈ ಹುದ್ದೆಗಳಿಗೆ ಆ.5 ರಂದು ನೇರ ಸಂದರ್ಶನ

ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿ ಮತ್ತು ಫೀಲ್ಡ್ ಆಫೀಸರ್ ಹುದ್ದೆಗಳ ನಿಯುಕ್ತಿಗಾಗಿ ಅರ್ಹ ಅಭ್ಯರ್ಥಿಗಳ ನೇಮಕಕ್ಕಾಗಿ ಆ.05 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

ಸಂದರ್ಶನವು ನಗರದ ಕೋಟೆ ಆವರಣದ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೦೨ ಗಂಟೆಯವರೆಗೆ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರದ ನಕಲುಗಳೊಂದಿಗೆ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಅರ್ಹತೆಗಳು

ಅರ್ಜಿದಾರರು ಕನಿಷ್ಠ ೧೮ ವಯಸ್ಸಿನವರಾಗಿರಬೇಕು, ಗರಿಷ್ಠ ವಯೋಮಿತಿ ಇರುವುದಿಲ್ಲ. ವಿಮಾ ಉತ್ಪನ್ನ ಮಾರಾಟ ಮಾಡುವ ಅನುಭವದೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಭ್ಯರ್ಥಿಯು ೫೦೦೦ ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರೆ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ೫೦೦೦ ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ ೧೨ನೇ ತರಗತಿ ಉತ್ತೀರ್ಣರಾಗಿರಬೇಕು. ಇತರೆ ವಿಮಾ ಕಂಪನಿ, ಸಂಸ್ಥೆ, ಸಂಘಗಳ ಏಜೆಂಟ್ ಆಗಿರಬಾರದು.

ನೇರ ಪ್ರತಿನಿಧಿ ಹುದ್ದೆ

ನೇರ ಪ್ರತಿನಿಧಿ ಹುದ್ದೆಗೆ ನಿರುದ್ಯೋಗಿ, ಸ್ವಯಂ ಉದ್ಯೋಗ ನಿರತ ಯುವಕರು, ಮಾಜಿ ವಿಮಾ ಕಂಪನಿಗಳ ಸಲಹೆಗಾರರು, ಅಂಗನವಾಡಿ ಕಾರ್ಯಕರ್ತೆರು, ಮಹಿಳಾ ಮಂಡಳಿಯ ಕಾರ್ಯಕರ್ತೆಯರು, ಮಾಜಿ ಗ್ರಾಮ ಪಂಚಾಯತ್ ಸದಸ್ಯರು ಅರ್ಹರಾಗಿರುತ್ತಾರೆ.

ಫೀಲ್ಡ್ ಆಫೀಸರ್ ಹುದ್ದೆ

ಫೀಲ್ಡ್ ಆಫೀಸರ್ ಹುದ್ದೆಗೆ ನಿವೃತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು, ನಿವೃತ್ತ ಗ್ರಾಮೀಣ ಅಂಚೆ ಸೇವಕರು ಸರ್ಹರಾಗಿರುತ್ತಾರೆ.

ಸಂದರ್ಶನ ಮೂಲಕ ಆಯ್ಕೆಯಾದ ಅಭ್ಯರ್ಥಿಯು ರಾಷ್ಟ್ರೀಯ ಉಳಿತಾಯ ಪತ್ರ ಅಥವಾ ಕಿಸಾನ್ ವಿಕಾಸ್ ಪತ್ರದ ರೂಪದಲ್ಲಿ ೫೦೦೦ ರೂ.ಗಳನ್ನು ಭದ್ರತಾ ಠೇವಣಿ ಇಡಬೇಕು. ಆಯ್ಕೆಯಾದ ನೇರ ಪ್ರತಿನಿಧಿ, ಫೀಲ್ಡ್ ಆಫೀಸರ್ಗಳಿಗೆ ತಮ್ಮ ವ್ಯವಹಾರ ತಕ್ಕಂತೆ ಸೂಕ್ತ ಕಮೀಷನ್ ಇದ್ದು, ನಿಗದಿತ ವೇತನವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಅಭಿವೃದ್ಧಿ ಅಧಿಕಾರಿ ಮಾರುತಿ.ವಿ.ಯು ಅವರ ಮೊ.೯೪೮೧೬೯೪೪೨೦ ಅಥವಾ ಅಂಚೆ ಅಧೀಕ್ಷಕರ ಕಾರ್ಯಾಲಯದ ದೂ.೦೮೩೯೨-೨೬೬೭೬೮ ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...