ಬೆಂಗಳೂರು : ಕರ್ನಾಟಕದಲ್ಲಿ 540 ಅರಣ್ಯ ರಕ್ಷಕ ಹುದ್ದೆಗೆ ಡಿ. 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಡಿ.30 ಕೊನೆಯ ದಿನಾಂಕವಾಗಿದೆ.
ರಾಜ್ಯ ಸರ್ಕಾರ ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ‘ಅರಣ್ಯ ರಕ್ಷಕ) ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ಶುಲ್ಕವನ್ನು ಅಂಚೆ ಕಛೇರಿಗಳಲ್ಲಿ ಪಾವತಿಸಲು ಕೊನೆಯ ಹೊರತುಪಡಿಸಿ ಬೇರೆ ಯಾವುದೇ ವಿಧಾನದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಹಾಗೂ ಆನ್ಲೈನ್ ಅರ್ಜಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ಜಾಲತಾಣ https://aranya.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ ಅರ್ಜಿಗಳನ್ನು ದಿನಾಂಕ 01:12:2023 ರಿಂದ 30:12:2023 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನಿಗದಿತ ಅರ್ಜಿ ಶುಲ್ಕವನ್ನು ಅಂಚೆ ಕಚೇರಿಗಳಲ್ಲಿ ಪಾವತಿಸಲು ಕೊನೆಯ ದಿನಾಂಕ 05:01:2024 ಕ್ಕೆ ನಿಗದಿಪಡಿಸಲಾಗಿರುತ್ತದೆ.