ಡಿಜಿಟಲ್ ಡೆಸ್ಕ್ : ಸರ್ಕಾರದ ಸ್ವತಂತ್ರವಾದ ಶಿಸ್ತುಬದ್ದ ಹಾಗೂ ಸಮವಸ್ತದಾರಿ ಸ್ವಯಂಸೇವಕರನ್ನು ಒಳಗೊಂಡ ಸ್ವಯಂ ಸೇವಾ ಸಂಸ್ಥೆಯಾದ ಗೃಹರಕ್ಷಕ ದಳದ ಘಟಕಗಳಲ್ಲಿ ಖಾಲಿ ಇರುವ ಪುರುಷ ಮತ್ತು ಮಹಿಳಾ ಗೃಹರಕ್ಷಕರ ಖಾಲಿ ಸ್ಥಾನಗಳನ್ನು ತುಂಬಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪುರುಷ ಒಟ್ಟು 173 ಮತ್ತು ಮಹಿಳೆ 16 ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಗಸ್ಟ್-12 ರೊಳಗೆ ಸಲ್ಲಿಸಬಹುದು. ಅರ್ಜಿಗಳು ಸಮಾದೇಷ್ಟರ ಕಾರ್ಯಾಲಯ, ಗೃಹರಕ್ಷಕ ದಳ, ಶಾಂತ ಮ್ಯಾನ್ಶನ್, ಎರಡನೇ ಮಹಡಿ, ಗಾಂಧಿನಗರ ಮುಖ್ಯ ರಸ್ತೆ, ಶಿವಮೊಗ್ಗ ಹಾಗೂ ಕೆಳಗೆ ತಿಳಿಸಲಾದ ಗೃಹರಕ್ಷಕ ದಳ ಘಟಕ/ಉಪ ಘಟಕಗಳ ಕಚೇರಿಗಳಲ್ಲಿ ದೊರೆಯಲಿದೆ.
ಶಿವಮೊಗ್ಗದಲ್ಲಿ ಪುರುಷ 37, ಮಹಿಳೆ 02 ಸಂಪರ್ಕಿಸಬೇಕಾದ ಘಟಕಾಧಿಕಾರಿ ಶೋಭರಾಜ್ ಮೊ.ಸಂ: -8310190881. ಕುಂಸಿ ಪುರುಷ 02 ಘಟಕಾಧಿಕಾರಿ ಪಿ.ಆರ್. ರಾಘವೇಂದ್ರ ಜೆಟ್ಟಿ -9916573291, ಹಾರನಹಳ್ಳಿ ಪುರುಷ 18 ಘಟಕಾಧಿಕಾರಿ ಸಿ.ಮಧು -9686631428. ಭದ್ರಾವತಿ ಪುರುಷ 18, – ಘಟಕಾಧಿಕಾರಿ ಜಗದೀಶ್ -9900283490. ಹೊಳೆಹೊನ್ನೂರು ಪುರುಷ 06, ಮಹಿಳೆ 14- ಘಟಕಾಧಿಕಾರಿ ಹೆಚ್.ಎಸ್.ಸುನೀಲ್ ಕುಮಾರ್ -8105840345. ತೀರ್ಥಹಳ್ಳಿ ಪುರುಷ 10- ಘಟಕಾಧಿಕಾರಿ ಹೆಚ್.ಪಿ.ರಾಘವೇಂದ್ರ -9535388472. ಸಾಗರ ಪುರುಷ 15 -ಘಟಕಾಧಿಕಾರಿ ಎಂ.ರಾಘವೇAದ್ರ -9632614031. ಜೋಗ ಪುರುಷ 05 -ಘಟಕಾಧಿಕಾರಿ ಡಿ.ಸಿದ್ದರಾಜು -9449699459. ಆನಂದಪುರ ಪುರುಷ 09- ಘಟಕಾಧಿಕಾರಿ ಎಂ.ರಾಘವೇAದ್ರ -9632614031. ಶಿಕಾರಿಪುರ ಪುರುಷ 05- ಘಟಕಾಧಿಕಾರಿ ಡಾ.ಸಂತೋಷ್ ಎಸ್ ಶೆಟ್ಟಿ -9845402789. ಶಿರಾಳಕೊಪ್ಪ ಪುರುಷ 06 -ಘಟಕಾಧಿಕಾರಿ ವೀರಭದ್ರಸ್ವಾಮಿ -9741629961. ಹೊಸನಗರ ಪುರುಷ 16- ಘಟಕಾಧಿಕಾರಿ ಕೆ.ಅಶೋಕ್ -9241434669. ರಿಪ್ಪನ್‌ಪೇಟೆ ಪುರುಷ 16- ಘಟಕಾಧಿಕಾರಿ ಟಿ.ಶಶಿಧರಾಚಾರ್ಯ -9741477689. ಸೊರಬ ಪುರುಷ 13- ಘಟಕಾಧಿಕಾರಿ ಹೆಚ್.ಎಂ.ಪ್ರಶಾAತ -7975306266.
ಗೃಹರಕ್ಷಕರಾಗಲು ಭಾರತೀಯ ಪ್ರಜೆಯಾಗಿರಬೇಕು. 19 ವರ್ಷ ಮೇಲ್ಪಟ್ಟು 45 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. 10ನೇ ತರಗತಿ ಉತ್ತೀರ್ಣರಾಗಿರಬೇಕು. ವೈದ್ಯಕೀಯವಾಗಿ ಸಶಕ್ತರಾಗಿರಬೇಕು. ಪೊಲೀಸ್ ಠಾಣೆಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆ/ಆರೋಪ ಅಥವಾ ಅಪರಾಧಿ ಎಂದು ನಿರ್ಣಯಿಸಲಾಗಿರದಿದ್ದಲ್ಲಿ/ದಾಖಲಾಗಿರದಿದ್ದಲ್ಲಿ ಅಂತಹವರು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಗೃಹರಕ್ಷಕದಳ ಜಿಲ್ಲಾ ಗೌರವ ಸಮಾದೇಷ್ಟರಾದ ತಿಳಿಸಿದ್ದಾರೆ.