ಬೆಂಗಳೂರು : 2024-25 ನೇ ಸಾಲಿನ ಎನ್.ಹೆಚ್.ಎಂ./ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮಗಳಲ್ಲಿ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಎನ್.ಹೆಚ್.ಎಂ./ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮಗಳ ಬಳ್ಳಾರಿ ಜಿಲ್ಲೆಯಲ್ಲಿ 2024-25 ನೇ ಸಾಲಿಗೆ ಖಾಲಿ ಇರುವ ವಿವಿಧ ವೃಂಧದ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಈ ಕೆಳಗೆ ಸೂಚಿಸಿದ ದಿನಾಂಕ ಮತ್ತು ಸ್ಥಳಗಳಲ್ಲಿ ಅರ್ಜಿಗಳನ್ನು ಪಡೆಯಹುದು.
1. ಖಾಲಿ ಇರುವ ಗುತ್ತಿಗೆ ಆಧಾರದ ಎನ್.ಹೆಚ್.ಎಂ./ಎನ್.ಯು.ಹೆಚ್.ಎಂ. ಮತ್ತು ಪಿ.ಎಂ.ಅಭೀಮ್ ಕಾರ್ಯಕ್ರಮದ ಹುದ್ದೆಗಳ ವಿವರ, ವಿದ್ಯಾರ್ಹತೆ, ಕೆಲಸದ ಅನುಭವ, ವೇತನ, ಮೀಸಲಾತಿ ಹಾಗೂ ವಯೋಮಿತಿ ಮಾಹಿತಿಯನ್ನು Ballari.nic.in ವೆಬ್ ಸೈಟ್ನಿಂದ ಪಡೆಯಲು ತಿಳಿಸಿದೆ.
2. ಅರ್ಜಿಯನ್ನು ದಿನಾಂಕ 23/09/2024ರ ರಿಂದ 03/10/2024 ರ ಸಂಜೆ 05:00 ಗಂಟೆಯವರೆಗೆ Ballari.nic.in ವೆಬ್ ಸೈಟ್ನಿಂದ ಡೌನ್ಲೋಡ್ ಮಾಡಬಹುದು ಅಥವಾ ಕಛೇರಿ ವೇಳೆಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಜಿಲ್ಲಾ ಆರ್.ಸಿ.ಹೆಚ್.ಅಧಿಕಾರಿಗಳ ಕಛೇರಿ, ಜಿಲ್ಲಾ ಆಸ್ಪತ್ರೆ ಆವರಣ, ಅನಂತಪುರ ರಸ್ತೆ, ಬಳ್ಳಾರಿ ಇಲ್ಲಿ ಪಡೆಯಬಹುದು.
3. ನಿಗದಿತ ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಸ್ವಯಂ ದೃಢೀಕರಿಸಿ ವಿದ್ಯಾರ್ಹತೆ, ಅನುಭವ ಹಾಗೂ ಇತರೆ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ದಿನಾಂಕ:- 04/10/2024 ರಂದು ಬೆಳಗ್ಗೆ 9:30 ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮೂಲ ದಾಖಲಾತಿ ಪರಿಶೀಲನೆಗೆ ತಪ್ಪದೆ ಹಾಜರಾಗಬೇಕು.
4. ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ದಿನಾಂಕ 19/10/2024ರಂದು ಬೆಳಗ್ಗೆ 11:00 ಗಂಟೆಗೆ ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು ಇವುಗಳಲ್ಲಿ ಯಾವುದಾದರು ಆಕ್ಷೇಪಣೆಗಳಿದ್ದಲ್ಲಿ ದಿನಾಂಕ 23/10/2024ರ ಸಂಜೆ 5:00 ರೊಳಗೆ ಸಲ್ಲಿಸತಕ್ಕದ್ದು.
5. ಜಿಲ್ಲಾ ಆರೋಗ್ಯ ಸಂಘ ಬಳ್ಳಾರಿ ತೀರ್ಮಾನಿಸಿದಂತೆ ಸದರಿ ಪತ್ರಿಕಾ ಪ್ರಕಟಣೆ ಮಾಡಲಾಗದ ಸಂದರ್ಭದಲ್ಲಿ ಕಾಯ್ದಿರಿಸಲಾದ ಹೆಚ್ಚುವರಿ ಪಟ್ಟಿಯನ್ನು (ವೇಟಿಂಗ್ ಲೀಸ್ಟ್) ಒಂದು ವರ್ಷದ ಮದ್ಯಾಂತರದಲ್ಲಿ ಖಾಲಿಯಾಗುವ ಹುದ್ದೆಗಳಿಗೆ ಸದರಿ ಕಾಯ್ದಿರಿಸಿದ ಪಟ್ಟಿಯಿಂದ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಕಂ ರೋಸ್ಟರ್ ಮೂಲ ಭರ್ತಿ ಮಾಡಲಾಗುವುದು.
ಆಯ್ಕೆಯನ್ನು ಕರ್ನಾಟಕ ಸರ್ಕಾರದ ಸಾಮಾನ್ಯ ನೇಮಕಾತಿ ಮಾರ್ಗಸೂಚಿಯಂತೆ ರೋಸ್ಟರ್ ಹಾಗೂ ಮೆರಿಟ್ ಆಧಾರದ ಮೇಲೆ 371ಜೆ ಮತ್ತು ನಾನ್ 371ಜೆ ಹಾಗೂ ಒಳ ಮೀಸಲಾತಿಯನ್ನು ಪರಿಗಣಿಸಿ ನೇಮಕ ಮಾಡಲಾಗುವುದು. ಹುದ್ದೆಗಳ ಸಂಖ್ಯೆಯನ್ನು ಹೆಚ್ಚಿಸುವ ಹಾಗೂ ಕಡಿಮೆ ಮಾಡುವ ಅಧಿಕಾರವನ್ನು ಆಯ್ಕೆ ಸಮಿತಿ ಕಾಯ್ದಿರಿಸಿಕೊಂಡಿರುತ್ತದೆ. ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9449843102 ಅನ್ನು ಕಛೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ.