ರಾಯಚೂರು : ಹಟ್ಟಿ ಚಿನ್ನದ ಗಣಿ ಕಂಪನಿಯ ವಿವಿಧ ವಿಭಾಗಗಳಲ್ಲಿ ಉಳಿಕೆ ಮೂಲ/ಸ್ಥಳೀಯೇತರ ವೃಂದ (Residual Parent (Non-local) Cadre) ದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸ್ಥಳೀಯೇತರ ವೃಂದದ ಅರ್ಹ ಅಭ್ಯರ್ಥಿಗಳಿಂದ ಕಂಪನಿಯ ವೆಬ್‌ಸೈಟ್ (https/huttigold karnataka gov.in) ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 19-03-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 03-05-2024
ಅರ್ಜಿ ಶುಲ್ಕ
ಪ.ಜಾ., ಪ.ಪಂ., ಪ್ರವರ್ಗ-1, ಮಾಜಿ ಸೈನಿಕ ಮತ್ತು ವಿಶೇಷಚೇತನ ಅಭ್ಯರ್ಥಿಗಳಾದಲ್ಲಿ ರೂ.100/-, ಹಿಂದುಳಿದ ವರ್ಗದ (ಪ್ರವರ್ಗ 2ಎ, 2ಬಿ, 3ಎ & 3ಬಿ) ಅಭ್ಯರ್ಥಿಗಳಾದಲ್ಲಿ ರೂ.300/- ಮತ್ತು ಸಾಮಾನ್ಯ ಅಭ್ಯರ್ಥಿಗಳಾದಲ್ಲಿ ರೂ.600/- ಮೊತ್ತದ ಶುಲ್ಕವನ್ನು (ಬ್ಯಾಂಕ್ ಶುಲ್ಕವನ್ನು ಹೊರತುಪಡಿಸಿ) ಆನ್ ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪೇಮೆಂಟ್ ಗೇಟ್ ವೇ ಮೂಲಕ ಪಾವತಿಸಬೇಕು.
ವಿಶೇಷ ಸೂಚನೆ
1) ವೃತ್ತಿ /ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test – CBT) ನಡೆಸುವ ದಿನಾಂಕ ಹಾಗೂ ಸ್ಥಳದ ಮಾಹಿತಿಯನ್ನು ಸಂಬಂಧಿಸಿದವರಿಗೆ ಕಂಪನಿಯ ವೆಬ್ ಸೈಟ್ ಹಾಗೂ ಇ-ಮೇಲ್ / ಎಸ್.ಎಮ್.ಎಸ್. ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
2) ವೃತ್ತಿ /ಕಂಪ್ಯೂಟರ್ ಆಧಾರಿತ ಪರೀಕ್ಷೆ (Computer Based Test – CRT)ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐದು ಅಭ್ಯರ್ಥಿಗಳನ್ನು ಮಾತ್ರ ದೈಹಿಕ / ಸಹಿಷ್ಣುತಾ ಪರೀಕ್ಷೆಗೆ ಹಾಜರಾಗಲು ಸಂಬಂಧಿಸಿದವರಿಗೆ ದೈಹಿಕ / ಸಹಿಷ್ಣುತಾ ಪರೀಕ್ಷೆಯ ವಿವರಗಳು/ಮಾಹಿತಿಯನ್ನು ಕಂಪನಿಯ ವೆಬ್ ಸೈಟ್ ಹಾಗೂ ಇ-ಮೇಲ್ / ಎಸ್.ಎಮ್.ಎಸ್. ಮೂಲಕ ತಿಳಿಸಲಾಗುವುದು ಹಾಗೂ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು.
3) ಅರ್ಹತಾ ಪಟ್ಟಿಯನ್ನು ತಯಾರಿಸಲು ಪ್ರತಿ ಹುದ್ದೆಗೆ ನಿಗದಿಪಡಿಸಿದ ಶೈಕ್ಷಣಿಕ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇ. 50% (50% weightage) ಹಾಗೂ ನೇಮಕಾತಿ ಪ್ರಾಧಿಕಾರವು ನಡೆಸುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ (Computer Based Test – CBT) ಯಲ್ಲಿ ಗಳಿಸಿದ ಒಟ್ಟು ಅಂಕಗಳ ಶೇ.50% ಅಂಕಗಳನ್ನು (50% weightage) ಪರಿಗಣಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೆರಿಟ್ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಪ್ರಕಟಿಸಲಾಗುವುದು.
ಷರತ್ತುಗಳು ಮತ್ತು ನಿಬಂಧನೆಗಳು
1. ಕಾನೂನು ರೀತ್ಯಾ ಸ್ಥಾಪಿಸಲ್ಪಟ್ಟಿರುವ ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಪದವಿ ಶಿಕ್ಷಣ, ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ 3 ವರ್ಷಗಳ ಡಿಪ್ಲೊಮಾ, ಹಾಗೂ ಕೈಗಾರಿಕೆತರಬೇತಿ ಸಂಸ್ಥೆಯಿಂದ 2 ವರ್ಷಗಳ ಐ.ಟಿ.ಐ. ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
2. ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಸಾಮಾನ್ಯ ಅಭ್ಯರ್ಥಿಗೆ 35 ವರ್ಷ, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿಗೆ ಗರಿಷ್ಠ 38 ವರ್ಷಗಳು ಮತ್ತು ಪ.ಜಾ., ಪ.ಪಂ. ಮತ್ತು ಪ್ರವರ್ಗ-1ಕ್ಕೆ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಮೀರಿರಬಾರದು.
3. ಅಭ್ಯರ್ಥಿಯು ಮಾಜಿ ಸೈನಿಕ/ವಿಧವೆ/ಅಂಗವಿಕಲರು ಹಾಗೂ ಇನ್ನಿತರರಿಗೆ ಕರ್ನಾಟಕ ಸರ್ಕಾರದ ನೇಮಕಾತಿ ಆದೇಶದಂತೆ ವಯೋಮಿತಿಯಲ್ಲಿ ನಿಯಮಾನುಸಾರಸಡಿಲಿಕೆಯನ್ನು ನೀಡಲಾಗುವುದು.