ಮಡಿಕೇರಿ : ಪೋಕ್ಸೋ ಕಾಯ್ದೆ 2012 ನಿಯಮ 3 ರಡಿ ಸಂತ್ರಸ್ಥ ಮಕ್ಕಳ ಸಹಾಯಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಬೆಂಬಲಿಗರನ್ನು ನೇಮಕ ಮಾಡಿಕೊಳ್ಳಬೇಕಾಗಿದ್ದು. ಇದರಲ್ಲಿ ಸಂಜ್ಞಾ ತಜ್ಞರು, ಅನುವಾದಕರು/ ಭಾಷಾಂತರಕಾರರು ಹಾಗೂ ನಿಯಮ (3) ಮತ್ತು 2(ಡಿ) ಅಡಿಯಲ್ಲಿ ವಿಶೇಷ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಸಂಜ್ಞಾ ತಜ್ಞರು: ವಾಕ್ ಮತ್ತು ಶ್ರವಣ ವಿಷಯದಲ್ಲಿ ಸಂಕೇತ ಭಾಷೆಯಲ್ಲಿ ತರಬೇತಿ/ ತಜ್ಞರಾಗಿರಬೇಕು. ವಾಕ್ ಮತ್ತು ಶ್ರವಣ ದೋಷ ಹೊಂದಿರುವ ಮಕ್ಕಳೊಂದಿಗೆ ಸಂಭಾಷಣೆ ನಡೆಸಲು ಪರಿಣತಿಯನ್ನು ಹೊಂದಿರಬೇಕು.
ಅನುವಾದಕರು/ಭಾಷಾಂತರಕಾರ: ಅಸ್ಸಾಂ, ಬಂಗಾಳಿ, ಹಿಂದಿ, ಇಂಗ್ಲೀಷ್, ತಮಿಳು, ಮಲೆಯಾಳಂ ಭಾಷೆಯ ಮಕ್ಕಳೊಂದಿಗೆ ಸಂವಹಿಸಿ ಅವರ ಮಾತುಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಬಲ್ಲವರಾಗಿರಬೇಕು.
ವಿಶೇಷ ಶಿಕ್ಕಕರು: ವಿಶೆಷ ಅಗತ್ಯವಿರುವ ಮಕ್ಕಳೊಂದಿಗೆ ಸಂವಹನದಲ್ಲಿ ತರಬೇತಿಯನ್ನು ಹೊಂದಿದವರಾಗಿರಬೇಕು (ಅಂದರೆ ಕಲಿಕಾದೋಷ ಮತ್ತು ಭಾವನಾತ್ಮಕ, ದೈಹಿಕ, ಬೆಳೆವಣಿಗೆ ಹಾಗೂ ನಡವಳಿಕೆಯ ಅಸ್ವಸ್ಥತೆಯನ್ನು ಹೊಂದಿರುವ ಮಕ್ಕಳೊಂದಿಗೆ ಸಂವಹಿಸಬಲ್ಲವರಾಗಿರಬೇಕು).
ಆಯ್ಕೆಯಾದ ಬೆಂಬಲಿಗರಿಗೆ ಪ್ರತೀ ಪ್ರಕರಣಕ್ಕೆ ರೂ.1000 ಗಳ ಗೌರವಧನ ನೀಡಲಾಗುವುದು. ಸೂಕ್ತ ವಿದ್ಯಾರ್ಹತೆ ಹಾಗೂ ಅನುಭವ ಹೊಂದಿರುವವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ, ಕೊಡಗು ಜಿಲ್ಲೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ.08272-228800 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.