alex Certify Jo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ‘ಜೋ ಲಿಂಡ್ನರ್’ ಅನುಮಾನಾಸ್ಪದ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Jo Lindner: ‘ಪೊಗರು’ ಚಿತ್ರದಲ್ಲಿ ನಟಿಸಿದ್ದ ಬಾಡಿಬಿಲ್ಡರ್ ‘ಜೋ ಲಿಂಡ್ನರ್’ ಅನುಮಾನಾಸ್ಪದ ಸಾವು

ಬಾಡಿ  ಬಿಲ್ಡಿಂಗ್ ನಲ್ಲಿ   ವಿಶ್ವ ವಿಖ್ಯಾತಿ ಪಡೆದಿದ್ದ ಜೋಎಸ್ತೆಟಿಕ್ಸ್ ಎಂಬ ಹೆಸರಿನಿಂದ ಫೇಮಸ್ ಆಗಿದ್ದ ತಾರೆ ಜೋ ಲಿಂಡ್ನರ್ ಮೃತಪಟ್ಟಿದ್ದಾರೆ . ಅವರಿಗೆ 30 ವರ್ಷ ವಯಸ್ಸಾಗಿದ್ದು, ಏಕಾಏಕಿ ನಿಧನರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.

ಜೋ ಲಿಂಡ್ನರ್ ಅವರು ಧ್ರುವ ಸರ್ಜಾ ಜೊತೆ ಪೊಗರು ಚಿತ್ರದಲ್ಲಿ ನಟಿಸಿದ್ದರು. ಈ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಧ್ರುವ ಸರ್ಜಾ ಜೊತೆ ಫೈಟ್ ಮಾಡಿದ್ದರು.

ಅವರು 8.5 ಮಿಲಿಯನ್ ಇನ್ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದರು, ಮತ್ತು ಅವರ ವೀಡಿಯೊಗಳು ಅವರ ಯೂಟ್ಯೂಬ್ ಚಾನೆಲ್ನಲ್ಲಿ ಸುಮಾರು 500 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದ್ದವು. ಸೋಷಿಯಲ್ ಮೀಡಿಯಾದಲ್ಲಿ ಲಿಂಡ್ನರ್ ಕೊನೆಯದಾಗಿ ಫಿಟ್ನೆಸ್ ಬಗ್ಗೆ ಒಂದು ಪೋಸ್ಟ್ ಹಾಕಿದ್ದರು. ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಅನೇಕರಿಗೆ ಮಾದರಿ ಆಗಿದ್ದ ಜೋ ಲಿಂಡ್ನರ್ ನಿಧನ ಅವರ ಅಭಿಮಾನಿಗಳಿಗೆ ಆಘಾತ ತಂದಿದೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...