
ಬ್ರಾಹ್ಮಣರು ಮತ್ತು ಬನಿಯಾಗಳನ್ನು ಗುರಿಯಾಗಿಸಿಕೊಂಡು ಪ್ರಚೋದನಾಕಾರಿ ಬರಹಗಳನ್ನು ಬರೆಯಲಾಗಿದ್ದು, ಬ್ರಾಹ್ಮಣರೆ ಕ್ಯಾಂಪಸ್ ಬಿಟ್ಟು ಹೊರಡಿ, ಜೊತೆಗೆ ಭಾರತವನ್ನು ಬಿಟ್ಟು ಸಹ ಹೋಗಿ ಎಂದು ಇದರಲ್ಲಿ ಬರೆಯಲಾಗಿದೆ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಈ ಬರಹಗಳ ಹಿಂದಿದೆ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆರೋಪಿಸಿದ್ದು, ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ಟೀಚರ್ಸ್ ಫೋರಂ ಸಹ ಈ ಕೃತ್ಯವನ್ನು ಖಂಡಿಸಿದೆ.