ಹಿರಿಯ IPS ಅಧಿಕಾರಿ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇದರಿಂದ ರೊಚ್ಚಿಗೆದ್ದ ವೈದ್ಯರು ತುರ್ತು ಚಿಕಿತ್ಸಾ ವಿಭಾಗದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಶಸ್ತ್ರಚಿಕಿತ್ಸೆಯ ನಂತರದ ಆರೈಕೆಯನ್ನು ಪಡೆಯುತ್ತಿರುವ ತಮ್ಮ ಪತ್ನಿಯ ಚಿಕಿತ್ಸೆಯ ಬಗ್ಗೆ ಅಸಮಾಧಾನಗೊಂಡು ಐಪಿಎಸ್ ಅಧಿಕಾರಿ ವೈದ್ಯರನ್ನು ನಿಂದಿಸಿದ್ದಾರೆ ಎನ್ನಲಾಗಿದೆ.
ʼದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ʼ ಉಲ್ಲೇಖಿಸಿದ ಸಾಕ್ಷಿಗಳ ಪ್ರಕಾರ ಯಾದವ್, ಪೋಲೀಸ್ ಸಮವಸ್ತ್ರದಲ್ಲಿಯೇ ಹಲವು ವ್ಯಕ್ತಿಗಳೊಂದಿಗೆ, ಡಾ ಲಕ್ಷ್ಯಾ ಅವರನ್ನು ಬೆದರಿಸುವ ರೀತಿಯಲ್ಲಿ, ಕೂಗುತ್ತಾ ತಮ್ಮ ಕೋಪ ಪ್ರದರ್ಶಿಸಿದ್ದಾರೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಅಡಿಯೋ ಇಲ್ಲವಾದರೂ ಅಧಿಕಾರಿಯ ವರ್ತನೆ ಅವರ ದೌರ್ಜನ್ಯ ತೋರಿಸುತ್ತಿದೆ.
ಸಫ್ದರ್ಜಂಗ್ ಆಸ್ಪತ್ರೆಯ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (RDA) ತನ್ನ ಅಧಿಕೃತ X ಖಾತೆಯಿಂದ ನಂತರ ಹಂಚಿಕೊಂಡ ಆಡಿಯೋ ಕ್ಲಿಪ್ ನಲ್ಲಿ ಯಾದವ್ ಅವರು ನಿಮಗಿಂತ ಎರಡು ಪಟ್ಟು ಹೆಚ್ಚು ಓದಿದ್ದೇನೆ, ಆದ್ದರಿಂದ ನೀವು ನನ್ನನ್ನು ಅಷ್ಟು ಸುಲಭವಾಗಿ ಪರಿಗಣಿಸಬೇಡಿ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಈ ಘಟನೆ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದು, ತುರ್ತು ವಿಭಾಗದಲ್ಲಿ ಕೆಲಸ ಮಾಡಲು ವೈದ್ಯರು ನಿರಾಕರಿಸಿದ್ದರು. ಅಂತಿಮವಾಗಿ ಆಸ್ಪತ್ರೆ ಆಡಳಿತ ಮಂಡಳಿ ಯಾದವ್ ಮತ್ತು ಅವರ ಪತ್ನಿಯನ್ನು ಆವರಣದಿಂದ ಹೊರಹೋಗುವಂತೆ ವಿನಂತಿಸಿದ ನಂತರವೇ ತುರ್ತು ಸೇವೆಗಳನ್ನು ಪುನರಾರಂಭಿಸಲಾಗಿದೆ.
RDA, VMMC & SJH strongly condemn the incident of verbal harassment and bullying faced by our gen surgery PG resident on duty on 24/11/24, by Mr. Brijendra Kumar Yadav (IPS Officer).
RDA demands an apology for his disgraceful and unacceptable behaviour. #violenceagainstdoctors pic.twitter.com/OaMphHc650— RDA VMMC & Safdarjung Hospital (@RDA_SJH) November 25, 2024