
ರಿಲಯನ್ಸ್ ಜಿಯೋ ಭಾರತದಲ್ಲಿ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6,499 ರೂಪಾಯಿಗೆ ಗ್ರಾಹಕರಿಗೆ ಸಿಗ್ತಿದೆ. ಗ್ರಾಹಕರು 1,999 ರೂಪಾಯಿ ಪಾವತಿಸುವ ಮೂಲಕ ಇಎಂಐ ನಲ್ಲಿ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
ಜಿಯೋ ಫೋನ್ ನೆಕ್ಸ್ಟ್ ಬೆಲೆ ಹೆಚ್ಚಿರಬಹುದೆಂದು ಜನರು ನಂಬಿದ್ದರು. ಆದ್ರೆ ಗ್ರಾಹಕರ ನಿರೀಕ್ಷೆ ತಪ್ಪಾಗಿತ್ತು. ಜಿಯೋ ಫೋನ್ ನೆಕ್ಸ್ಟ್ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜಿಯೋ ಫೋನ್ ನೆಕ್ಸ್ಟ್ ಗೆ ಉತ್ತಮ ಪ್ರತಿಕ್ರಿಯೆ ಸಿಗ್ತಿದೆ ಎಂದು ಕಂಪನಿ ಹೇಳಿದೆ.
ಜಿಯೋ ವೆಬ್ಸೈಟ್ ನಲ್ಲಿ ಬುಕ್ಕಿಂಗ್ ಶುರುವಾಗಿದ್ದು, ಮುಂದಿನ ವಾರಗಳಲ್ಲಿ ಡಿಲೆವರಿ ಶುರುವಾಗುವ ಸಾಧ್ಯತೆಯಿದೆ. ಜಿಯೋ ಫೋನ್ ನೆಕ್ಸ್ಟ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. 5.45-ಇಂಚಿನ ಎಚ್ ಡಿ ಪ್ಲಸ್ ಡಿಸ್ಪ್ಲೆ, 13ಎಂಪಿ ಹಿಂಬದಿ ಕ್ಯಾಮರಾ ಮತ್ತು 3,500mAh ಬ್ಯಾಟರಿಯೊಂದಿಗೆ 10ಡಬ್ಲ್ಯು ಚಾರ್ಜಿಂಗ್ ಬೆಂಬಲವಿದೆ. ಹ್ಯಾಂಡ್‌ಸೆಟ್ PragatiOS ಎಂಬ ಹೊಸ OS ರನ್ ಮಾಡುತ್ತದೆ. ಇದು ಆಂಡ್ರಾಯ್ಡ್ 11 ಗೊ ಆವೃತ್ತಿಯ ಮಾರ್ಪಡಿಸಿದ ಆವೃತ್ತಿಯಂತೆ ಕಂಡುಬರುತ್ತದೆ.
ಭಾರತದಲ್ಲಿ 300 ಮಿಲಿಯನ್ ಫೀಚರ್ ಫೋನ್ ಬಳಕೆದಾರರನ್ನು ಗುರಿಯಾಗಿಸಿಟ್ಟುಕೊಂಡು ರಿಲಯನ್ಸ್ ಜಿಯೋ, ಈ ಸ್ಮಾರ್ಟ್‌ಫೋನನ್ನು ದೀಪಾವಳಿಯ ಮೊದಲು ಬಿಡುಗಡೆ ಮಾಡಿದೆ. ಇದನ್ನು 1,999 ರೂಪಾಯಿ ಮತ್ತು 500 ರೂಪಾಯಿ ಸಂಸ್ಕರಣಾ ಶುಲ್ಕದೊಂದಿಗೆ ಖರೀದಿಸಬಹುದು. ಉಳಿದ ಹಣವನ್ನು 18 ಅಥವಾ 24 ತಿಂಗಳುಗಳ ಮಾಸಿಕ ಕಂತುಗಳಲ್ಲಿ ಪಾವತಿಸಬಹುದು.