ಬಹುನಿರೀಕ್ಷಿತ ಜಿಯೋ ಫೋನ್ ನೆಕ್ಸ್ಟ್ ನ್ನು ಅಗ್ಗದ ಬೆಲೆಯಲ್ಲಿ ಮುಂದಿನ ಸೆಪ್ಟೆಂಬರ್ ಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಜೂನ್ ನಲ್ಲಿ ನಡೆದ 44ನೇ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾಗಿತ್ತು.
ಇದನ್ನು ರಿಲಯನ್ಸ್ ಜಿಯೋ ಗೂಗಲ್ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಆಂಡ್ರಾಯ್ಡ್ 11 (ಗೋ ಆವೃತ್ತಿ) ಮಾಡುವ ನಿರೀಕ್ಷೆಯಿದೆ. ಮಾಹಿತಿ ಪ್ರಕಾರ ಇದು 5.5-ಇಂಚಿನ ಹೆಚ್ ಡಿ ಡಿಸ್ ಪ್ಲೇ ಯೊಂದಿಗೆ ಬರುತ್ತದೆ. ಹಾಗೂ ಎರಡು ಶೇಖರಣಾ ಸಂರಚನೆಗಳನ್ನು ಹೊಂದಿದ್ದು, 4G ವೋಲ್ಟ್ ಸಂಪರ್ಕವನ್ನು ಹೊಂದಿದೆ ಎಂದು ಹೇಳಲಾಗಿದೆ.
ಪ್ರಸಿದ್ಧ ಟಿಪ್ ಸ್ಟರ್ ಯೋಗೀಶ್ ಅವರ ಟ್ವೀಟ್ ಪ್ರಕಾರ, ಜಿಯೋಫೋನ್ ನೆಕ್ಸ್ಟ್ 3,499 ರೂ.ಗೆ ಸೆಪ್ಟೆಂಬರ್ 10 ರಿಂದ ಭಾರತದಲ್ಲಿ ಮಾರಾಟಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಜಿಯೋಫೋನ್ ನೆಕ್ಸ್ಟ್ $50 ಅಂದರೆ 3,716ಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಎಂಬ ಮಾಹಿತಿ ಸೋರಿಕೆಯಾಗಿತ್ತು.
ಜಿಯೋಫೋನ್ ವಿಶೇಷತೆಗಳು
ಜಿಯೋಫೋನ್ ನೆಕ್ಸ್ಟ್ ಆಂಡ್ರಾಯ್ಡ್ 11 (ಗೋ ಆವೃತ್ತಿ) ಮತ್ತು 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಇದು ಕ್ವಾಲ್ಕಾಮ್ ಕ್ಯೂಎಮ್215 ಎಸ್ಒಸಿ ನಿಂದ ಹೊಂದಿರಬಹುದು ಮತ್ತು 2 ಜಿಬಿ ಅಥವಾ 3 ಜಿಬಿ RAM ನೊಂದಿಗೆ ಬರಬಹುದು.
16 ಜಿಬಿ ಅಥವಾ 32 ಜಿಬಿ ಇಎಮ್ ಎಮ್ ಸಿ, 4.5 ಆಂತರಿಕ ಸಂಗ್ರಹಣೆ ಇರಬಹುದು. ಫೋನ್ ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆನ್ಸರ್‌ನೊಂದಿಗೆ ಸೆಲ್ಫಿ ಕ್ಯಾಮರಾ ಬರಬಹುದು. ಜಿಯೋಫೋನ್ ನೆಕ್ಸ್ಟ್ 4ಜಿ ವೋಲ್ಟ್ ಬೆಂಬಲದೊಂದಿಗೆ ಬರಬಹುದು ಮತ್ತು ಡ್ಯುಯಲ್-ಸಿಮ್ ಬೆಂಬಲವನ್ನು ಹೊಂದಿರಬಹುದು. ಫೋನ್ ಅನ್ನು 2,500 ಎಂಎಎಚ್ ಬ್ಯಾಟರಿ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.
ಜಿಯೋಫೋನ್ ನೆಕ್ಸ್ಟ್‌ನ ವಿಶೇಷತೆಗಳನ್ನು ಟಿಪ್ ಮಾಡುವುದು ಇದೇ ಮೊದಲಲ್ಲ. ಇತ್ತೀಚೆಗೆ, ಅದರ ಬೂಟ್ ಅನಿಮೇಷನ್ ಮತ್ತು ಕೆಲವು ವೈಶಿಷ್ಟ್ಯಗಳನ್ನು ಎಕ್ಸ್‌ಡಿಎ ಡೆವಲಪರ್ಸ್ ಪ್ರಧಾನ ಸಂಪಾದಕ ಮಿಶಾಲ್ ರೆಹಮಾನ್ ಹಂಚಿಕೊಂಡಿದ್ದರು.