ಇಚ್ಛೆಯನುಸಾರದ ಪ್ಲಾನ್‌ಗಳ ದರಗಳ ಪಾವತಿಗೆ ಯುಪಿಐ ಮೂಲಕ ಸ್ಥಿರ ಸೂಚನೆಗಳನ್ನು ಸೆಟ್ ಮಾಡುವ ಆಯ್ಕೆಯನ್ನು ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಕೊಡಮಾಡಿದೆ. ಇದಕ್ಕಾಗಿ ಎನ್‌ಪಿಸಿಐ ಜೊತೆಗೆ ಟೆಲಿಕಾಂ ಸೇವಾದಾರ ಒಡಂಬಡಿಕೆ ಮಾಡಿಕೊಂಡಿದೆ.
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮತ್ತು ಜಿಯೋ ಈ ಕುರಿತು ಜಂಟಿ ಗೋಷ್ಠಿಯೊಂದರಲ್ಲಿ, ಯುಪಿಐ ಆಟೋಪೇ ಸೌಲಭ್ಯವನ್ನು ಜಿಯೋ ಗ್ರಾಹಕರಿಗೆ ಕೊಡಮಾಡಿರುವುದಾಗಿ ತಿಳಿಸಿವೆ.
ಗ್ರಾಹಕರಿಗೆ ಇಂಪಾರ್ಟೆಂಟ್ ಮಾಹಿತಿ ನೀಡಿದ SBI: YONO, UPI, INB ಡಿಜಿಟಲ್ ಸೇವೆಯಲ್ಲಿ ವ್ಯತ್ಯಯ
ಈ ಮೂಲಕ, ಮೈಜಿಯೋ ಅಪ್ಲಿಕೇಶನ್ ಮುಖಾಂತರ ಸ್ಥಿರ ಸೂಚನೆಗಳನ್ನು ಯುಪಿಐ ಆಟೋಪೇ ಮೂಲಕ ತಮ್ಮ ಮೆಚ್ಚಿನ ಟ್ಯಾರಿಫ್ ಪ್ಲಾನ್‌ಗಳನ್ನು ಸುಲಭವಾಗಿ ಸೆಟ್ ಮಾಡಲು ಜಿಯೋ ಗ್ರಾಹಕರಿಗೆ ಅವಕಾಶವಿದೆ.
5,000 ರೂ. ವರೆಗಿನ ರೀಚಾರ್ಜ್ ಮೊತ್ತಗಳಿಗೆ, ಜಿಯೋ ಗ್ರಾಹಕರು ತಮ್ಮ ಯುಪಿಐ ಪಿನ್ ಅನ್ನು ರಿಚಾರ್ಜ್ ವೇಳೆ ನಮೂದಿಸಬೇಕಾದ ಅಗತ್ಯ ಇನ್ನು ಮುಂದೆ ಇರುವುದಿಲ್ಲ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.