ಮುಂಬೈ: ರಿಲಯನ್ಸ್ ಜಿಯೋ ಭಾರತದಲ್ಲಿ ತನ್ನ 5ಜಿ ಸೇವೆ ಪ್ರಾರಂಭಿಸಲು ಕ್ಷಣಗಣನೆ ಆರಂಭವಾಗಿದೆ. ದೀಪಾವಳಿ ಸಮಯದಲ್ಲಿ ಇದು ಆಯ್ದ ನಗರಗಳಲ್ಲಿ ಲಭ್ಯವಾಗಲಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ, ದೀಪಾವಳಿ ಸಮಯದಲ್ಲಿ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತಾ ಹಾಗೂ ವಾರಣಾಸಿಯಲ್ಲಿ ಮಾತ್ರ ಜಿಯೋ 5ಜಿ ಸೇವೆ ಪ್ರಾರಂಭವಾಗಲಿದೆ.
ಇದರ ಅಂಗವಾಗಿ ಪ್ರಾರಂಭಿಕವಾಗಿ ಆಕರ್ಷಕ ಆಫರ್‌ಗಳನ್ನು ಜಿಯೊ ಘೋಷಿಸಿದೆ. ಜಿಯೋದ ಟ್ರೂ 5G ಸೇವೆಯ ಬೀಟಾ ಪ್ರಯೋಗವನ್ನು ಅಸ್ತಿತ್ವದಲ್ಲಿರುವ ಜಿಯೋ ಬಳಕೆದಾರರಿಗೆ ಆಹ್ವಾನದ ಮೂಲಕ ನೀಡಲಾಗುತ್ತದೆ. 5G ಯ ಬೀಟಾ ಪ್ರಯೋಗವನ್ನು ಪಡೆಯುವ ಗ್ರಾಹಕರು 1Gbps ವರೆಗೆ ಡೇಟಾ ವೇಗವನ್ನು ಪಡೆಯುತ್ತಾರೆ.
ಜಿಯೋ 5G ವೆಲ್‌ಕಮ್ ಆಫರ್ ಘೋಷಿಸಿದೆ. ಪ್ರಯೋಗಕ್ಕೆ ಆಹ್ವಾನಿಸಿದ ಬಳಕೆದಾರರನ್ನು ಸ್ವಯಂಚಾಲಿತವಾಗಿ ಜಿಯೋ ಟ್ರ್ಯೂ 5G ಸೇವೆಗೆ ಅಪ್‌ಗ್ರೇಡ್ ಮಾಡಲಾಗುತ್ತದೆ. ಅವರ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ನಲ್ಲಿ 5G ಸೇವೆಗಳನ್ನು ಪಡೆಯಲು ಅವರಿಗೆ ಹೊಸ ಸಿಮ್ ಅಗತ್ಯವಿಲ್ಲ.