ದೇಶದಲ್ಲಿ 4ಜಿ ಸೇವೆ ಪೂರೈಸುತ್ತಿರುವ ಸೇವಾದಾರರ ಪೈಕಿ ಅತ್ಯಂತ ವೇಗದ ಡೌನ್ಲೋಡ್ ಸ್ಪೀಡ್ ಕೊಡುವ ವಿಚಾರದಲ್ಲಿ ರಿಲಾಯನ್ಸ್‌ನ ಜಿಯೋ ಅಗ್ರಸ್ಥಾನದಲ್ಲಿದೆ. 24.1ಎಂಬಿಪಿಎಸ್ ದರದಲ್ಲಿ ಡೌನ್ಲೋಡಿಂಗ್ ಬೆಂಬಲಿಸುವಷ್ಟು ವೇಗದ ಅಂತರ್ಜಾಲ ಪೂರೈಸುವ ಜಿಯೋ, ನವೆಂಬರ್ ತಿಂಗಳಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿದ ವರದಿಯಲ್ಲಿ ಅಗ್ರ ಸ್ಥಾನಿಯಾಗಿದೆ.
ಇದೇ ವೇಳೆ ವೊಡಾಫೋನ್ – ಐಡಿಯಾ ಹಾಗೂ ಭಾರ್ತಿ ಏರ್‌ಟೆಲ್ ಸಹ ತಮ್ಮ 4ಜಿ ಡೌನ್ಲೋಡಿಂಗ್ ವೇಗವನ್ನು ಸುಧಾರಿಸಿಕೊಂಡಿದ್ದು, ಕ್ರಮವಾಗಿ, 8.9% ಮತ್ತು 5%ನಷ್ಟು ಹೆಚ್ಚಿನ ವೇಗದಲ್ಲಿ 4ಜಿ ಡೇಟಾ ಡೌನ್ಲೋಡಿಂಗ್ ಮಾಡುವಂತೆ ತಂತಮ್ಮ ಜಾಲಗಳನ್ನು ಸುಧಾರಿಸಿಕೊಂಡಿವೆ. ಜಿಯೋದ ಡೌನ್ಲೋಡ್ ವೇಗವು ಅಕ್ಟೋಬರ್‌ಗೆ ಹೋಲಿಸಿದಲ್ಲಿ ನವೆಂಬರ್‌ನಲ್ಲಿ 10%ನಷ್ಟು ಹೆಚ್ಚಳವಾಗಿದೆ.
ಟೀಂ ಇಂಡಿಯಾದಲ್ಲಿ ಅನಿರೀಕ್ಷಿತ ಬೆಳವಣಿಗೆ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಡುವೆ ಬಿಗ್ ಫೈಟ್…?
ಇದೇ ವೇಳೆ ಅಪ್ಲೋಡ್ ವಿಚಾರದಲ್ಲಿ ವೊಡಾಫೋನ್ – ಐಡಿಯಾ ಅಗ್ರಸ್ಥಾನದಲ್ಲಿದ್ದು, 8ಎಂಬಿಪಿಎಸ್‌ನಷ್ಟು ವೇಗದಲ್ಲಿ ಅಪ್ಲೋಡಿಂಗ್ ಮಾಡುವಷ್ಟು ಶಕ್ತಿಯ 4ಜಿ ಸೇವೆ ಪೂರೈಸುತ್ತಿದೆ. ಇದೇ ವೇಳೆ ಏರ್‌ಟೆಲ್ ಹಾಗೂ ಜಿಯೋ ಕ್ರಮವಾಗಿ 5.6 ಎಂಬಿಪಿಎಸ್ ಹಾಗೂ 7.1 ಎಂಬಿಪಿಎಸ್ ವೇಗದಲ್ಲಿ ಅಪ್ಲೋಡಿಂಗ್‌ಗೆ ಅನುವು ಮಾಡಿಕೊಡುತ್ತಿವೆ.
ದೇಶಾದ್ಯಂತ ಸಂಗ್ರಹಿಸುವ ದತ್ತಾಂಶಗಳ ವಿಶ್ಲೇಷಣೆ ಮಾಡುವ ಟ್ರಾಯ್, ರಿಯಲ್ ಟೈಂ ಆಧಾರದಲ್ಲಿ ಮೈಸ್ಪೀಡ್ ಅಪ್ಲಿಕೇಶನ್ ನೆರವಿನಿಂದ ಸರಾಸರಿ ವೇಗವನ್ನು ಲೆಕ್ಕಾಚಾರ ಮಾಡುತ್ತದೆ.