ಮುಖೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪನಿ ಜಿಯೋ ಇತ್ತೀಚೆಗೆ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಬದಲಾಯಿಸಿದೆ. ಕಂಪನಿ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದೆ. ಇದ್ರಿಂದಾಗಿ ಜಿಯೋ ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ. ಈ ಮಧ್ಯೆ ಅಗ್ಗದ ರಿಚಾರ್ಜ್ ಪ್ಲಾನ್ ಹುಡುಕ್ತಿರುವ ಗ್ರಾಹಕರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.
ಜಿಯೋ ಸಿಮ್ ಬಳಕೆದಾರರಿಗೆ ಜಿಯೋ ಹೊಸ ಆಫರ್ ನೀಡಿದೆ. ಈ ಯೋಜನೆ ಬೆಲೆ 1899 ರೂಪಾಯಿ. ಇದು ಜಿಯೋದ ಅತ್ಯಂತ ಬೆಸ್ಟ್ ಪ್ಲಾನ್ ಗಳಲ್ಲಿ ಒಂದು. ಯಾಕೆಂದ್ರೆ ಬೆಲೆ ಕಡಿಮೆಯಿದ್ದು, ದೀರ್ಘ ಮಾನ್ಯತೆಯನ್ನು ಗ್ರಾಹಕರು ಪಡೆಯಬಹುದಾಗಿದೆ.
ಜಿಯೋದ ಈ ಯೋಜನೆಯಲ್ಲಿ, ನೀವು ಒಟ್ಟು 336 ದಿನಗಳ ಅಂದರೆ 11 ತಿಂಗಳುಗಳ ಮಾನ್ಯತೆಯನ್ನು ಪಡೆಯುತ್ತೀರಿ. ಕಂಪನಿ ಈ ಯೋಜನೆಯಲ್ಲಿ ಅನಿಯಮಿತ ಕರೆ ಸೌಲಭ್ಯವನ್ನು ನೀಡ್ತಿದೆ. ಒಟ್ಟು 3600 ಉಚಿತ ಎಸ್‌ಎಂಎಸ್ ಗ್ರಾಹಕರು ಪಡೆಯಬಹುದು.
ಈ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ 24GB ಡೇಟಾವನ್ನು ನೀಡುತ್ತಿದೆ. ಜಿಯೋ ಟಿವಿಗೆ ಉಚಿತ ಪ್ರವೇಶ, ಜಿಯೋ ಸಿನೆಮಾಕ್ಕೆ ಉಚಿತ ಚಂದಾದಾರಿಕೆ ಸೇರಿದಂತೆ ಕೆಲ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ.