ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಸಾಕಷ್ಟು ಸುದ್ದಿ ಮಾಡಿದೆ. ಮಾರುಕಟ್ಟೆಗೆ ಬರ್ತಿದ್ದಂತೆ ಅಗ್ಗದ ಪ್ಲಾನ್ ನೀಡಿ ಜಿಯೋ ಧಮಾಲ್ ಮಾಡಿತ್ತು. ಆದ್ರೆ ಈಗ ಗ್ರಾಹಕರಿಗೆ ಜಿಯೋ ಶಾಕ್ ಮೇಲೆ ಶಾಕ್ ನೀಡ್ತಿದೆ. ಕೆಲ ದಿನಗಳ ಹಿಂದಷ್ಟೆ ಪ್ರಿಪೇಯ್ಡ್ ಯೋಜನೆ ಬೆಲೆ ಏರಿಕೆ ಮಾಡಿದ್ದ ಜಿಯೋ ಈಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದೆ. ಈಗ ಜಿಯೋ ತನ್ನ ಜಿಯೋ ಫೋನ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.
ಜಿಯೋ ವೆಬ್ಸೈಟ್ನಲ್ಲಿ ಜಿಯೋ ಫೋನ್ ಯೋಜನೆಗಳ ಬೆಲೆಯನ್ನು ನವೀಕರಿಸಿದೆ. ಜಿಯೋ ಮೂರು ಪ್ಲಾನ್ಗಳ ಬೆಲೆಯನ್ನು ಹೆಚ್ಚಿಸಿದೆ. ಅಲ್ಲದೆ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಜಿಯೋ ಫೋನ್ನ 155 ರೂಪಾಯಿ ರೀಚಾರ್ಜ್ ಪ್ಲಾನ್ನ ಬೆಲೆ ಈಗ 186 ರೂಪಾಯಿಗೆ ಏರಿಕೆಯಾಗಿದೆ. ಕಂಪನಿಯು ಬಳಕೆದಾರರಿಗೆ ಪ್ರತಿದಿನ 1ಜಿಬಿ ಇಂಟರ್ನೆಟ್, ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ. ಇದು 28 ದಿನಗಳ ಮಾನ್ಯತೆಯನ್ನು ಹೊಂದಿದೆ.
ಇದುವರೆಗೆ 186 ರೂಪಾಯಿ ಜಿಯೋ ಫೋನ್ ರೀಚಾರ್ಜ್ ಪ್ಲಾನ್ ಈಗ 222 ರೂಪಾಯಿಗೆ ಏರಿಕೆಯಾಗಿದೆ. 222 ಆಲ್-ಇನ್-ಒನ್ ಯೋಜನೆ 20 ದಿನಗಳ ಮಾನ್ಯತೆಯೊಂದಿಗೆ ಬರಲಿದ್ದು, ದಿನಕ್ಕೆ 2ಜಿಬಿ ಡೇಟಾ ನೀಡುತ್ತದೆ.
749 ರೂಪಾಯಿಯಿದ್ದ ಜಿಯೋ ಫೋನ್ನ ರೀಚಾರ್ಜ್ ಪ್ಲಾನ್ ಬೆಲೆ ಈಗ 888 ಆಗಿದೆ. ಈ ಯೋಜನೆ 28 ದಿನಗಳ ಸಿಂಧುತ್ವ ಹೊಂದಿದ್ದು 2ಜಿಬಿ ಡೇಟಾ ನೀಡುತ್ತದೆ.
ಇದಲ್ಲದೆ ಜಿಯೋ ಫೋನ್ ಗ್ರಾಹಕರಿಗೆ ಕಂಪನಿ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. 152 ರೂಪಾಯಿ ಈ ಯೋಜನೆಯಲ್ಲಿ ಗ್ರಾಹಕರಿಗೆ 0.5ಜಿಬಿ ಡೇಟಾ ಸಿಗಲಿದೆ. ಇದು 28 ದಿನಗಳ ಮಾನ್ಯತೆ ಹೊಂದಿದೆ.