ಗ್ರಾಹಕರನ್ನು ಸೆಳೆಯಲು ಜಿಯೋ ಸಾಕಷ್ಟು ಅಗ್ಗದ ಪ್ಲಾನ್ ಗಳನ್ನು ಜಾರಿಗೆ ತಂದಿದೆ. ಜಿಯೋ, ಟೆಲಿಕಾಂ ಕ್ಷೇತ್ರಕ್ಕೆ ಬರ್ತಿದ್ದಂತೆ ಬೆಲೆ ಯುದ್ಧ ಶುರುವಾಗಿದ್ದು, ಇನ್ನೂ ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಮುಂದುವರೆದಿದೆ. ಜಿಯೋ ಬಳಿ ನೆಟ್‌ಫ್ಲಿಕ್ಸ್, ಅಮೆಜಾನ್, ಡಿಸ್ನಿ-ಹಾಟ್‌ಸ್ಟಾರ್ ಪ್ಯಾಕೇಜ್‌ಗಳೊಂದಿಗೆ ಡೇಟಾವನ್ನು ನೀಡುವ ಅಗ್ಗದ ಯೋಜನೆಗಳಿವೆ.
ಜಿಯೋಪೋಸ್ಟ್ ಪೇಯ್ಡ್ ಪ್ಲಸ್‌ನಲ್ಲಿ 399 ರೂಪಾಯಿ ಅಗ್ಗದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಎಲ್ಲಾ ಮೂರು ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಂ ಮತ್ತು ಡಿಸ್ನಿ-ಹಾಟ್‌ಸ್ಟಾರ್ ಉಚಿತವಾಗಿ ಸಿಗ್ತಿದೆ. ಈ ಯೋಜನೆಯು 75ಜಿಬಿ ಡೇಟಾದೊಂದಿಗೆ 200ಜಿಬಿ ಗರಿಷ್ಠ ಡೇಟಾ ರೋಲ್ಓವರ್ ನೀಡುತ್ತದೆ. 75ಜಿಬಿ ಡೇಟಾ ಮಿತಿ ದಾಟಿದ ನಂತರ, ಬಳಕೆದಾರರು 10 ರೂಪಾಯಿ ಜಿಬಿ ದರದಲ್ಲಿ ಡೇಟಾವನ್ನು ಖರೀದಿಸಬೇಕಾಗುತ್ತದೆ.
ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಎಂಎಸ್ ನೀಡುತ್ತದೆ. ಅಮೆಜಾನ್ ಪ್ರೈಮ್ ವಿಡಿಯೋ ಚಂದಾದಾರಿಕೆ ಪ್ರವೇಶವು 1 ವರ್ಷಕ್ಕೆ ಮಾನ್ಯವಾಗಿರುತ್ತದೆ.
ಇದಲ್ಲದೆ ಕಂಪನಿ 599 ರೂಪಾಯಿ ಪ್ಲಾನ್ ಕೂಡ ನೀಡ್ತಿದೆ. ಇದ್ರಲ್ಲಿ 100 ಜಿಬಿ ಡೇಟಾ ಹಾಗೂ 200 ಜಿಬಿ ರೋಲ್ ಓವರ್ ಡೇಟಾ ಸಿಗಲಿದೆ. ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಕೂಡ ಈ ಪ್ಲಾನ್ ನಲ್ಲಿ ಉಚಿತವಾಗಿ ಲಭ್ಯವಿದೆ.