ಅಗ್ಗದ ಪ್ಲಾನ್ ನೀಡುವುದ್ರಲ್ಲಿ ಜಿಯೋ ಮುಂದಿದೆ. ಜಿಯೋ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಅನೇಕ ಅಗ್ಗದ ಯೋಜನೆಗಳನ್ನು ನೀಡ್ತಿದೆ. ಕೆಲ ಯೋಜನೆಗಳು ಡೇಟಾ ನೀಡಿದ್ರೆ ಮತ್ತೆ ಕೆಲ ಯೋಜನೆಗಳು ಕರೆ ಹಾಗೂ ಡೇಟಾ ಎರಡನ್ನೂ ನೀಡುತ್ತವೆ. ಡೇಟಾದ ಕೆಲ ಅಗ್ಗದ ಪ್ಲಾನ್ ಇಲ್ಲಿದೆ.
ರಿಲಯನ್ಸ್ ಜಿಯೋ 75 ರೂಪಾಯಿ ಯೋಜನೆ ನೀಡ್ತಿದೆ. ಈ ಯೋಜನೆ 28 ದಿನಗಳ ಮಾನ್ಯತೆ ಹೊಂದಿದೆ. ಅನಿಯಮಿತ ಕರೆ ಜೊತೆ ಒಟ್ಟು 3 ಜಿಬಿ ಡೇಟಾ ಸಿಗ್ತಿದೆ. ಗ್ರಾಹಕರು ಪ್ರತಿದಿನ 100ಎಂಬಿ ಡೇಟಾ ಬಳಸಬಹುದು. ಯೋಜನೆಯಲ್ಲಿ 50 ಉಚಿತ ಎಸ್‌ಎಂಎಸ್ ಸಹ ಲಭ್ಯವಿದೆ. ಈ ಯೋಜನೆಯಲ್ಲಿ ದಿನಕ್ಕೆ 2.67 ರೂಪಾಯಿ ಖರ್ಚಾಗುತ್ತದೆ.
ಜಿಯೋಫೋನ್ ಗ್ರಾಹಕರಿಗೆ 39 ರೂಪಾಯಿಗಳ ರೀಚಾರ್ಜ್ ಪ್ಲಾನ್ ನೀಡ್ತಿದೆ ಕಂಪನಿ. ಈ ಯೋಜನೆಯಲ್ಲಿ, 100ಎಂಬಿ ಡೇಟಾ 14 ದಿನಗಳ ಮಾನ್ಯತೆಯೊಂದಿಗೆ ಲಭ್ಯವಿದೆ. ಎಲ್ಲಾ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ಲಭ್ಯವಿದೆ. ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕಯನ್ನು ಉಚಿತವಾಗಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ 2.78 ರೂಪಾಯಿ ಖರ್ಚು ಬರುತ್ತದೆ.
ಜಿಯೋ 69 ರೂಪಾಯಿಗಳ ಯೋಜನೆಯನ್ನೂ ಗ್ರಾಹಕರಿಗೆ ನೀಡ್ತಿದೆ. ಇದರ ಸಿಂಧುತ್ವ 14 ದಿನಗಳು. ಪ್ರತಿದಿನ 0.5 ಜಿಬಿ ಡೇಟಾವನ್ನು ಗ್ರಾಹಕರು ಬಳಸಬಹುದು. ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಮತ್ತು ಪ್ರತಿ ದಿನ 100 ಎಸ್‌ಎಂಎಸ್ ಲಭ್ಯವಿದೆ. ಜಿಯೋ ಅಪ್ಲಿಕೇಶನ್‌ಗಳ ಉಚಿತ ಚಂದಾದಾರಿಕೆ ಸಹ ಸಿಗ್ತಿದೆ. ಈ ಯೋಜನೆಯಲ್ಲಿ ದಿನಕ್ಕೆ 4.92 ರೂಪಾಯಿ ಖರ್ಚು ಬರುತ್ತದೆ.
ಜಿಯೋದ 98 ರೂಪಾಯಿ ಯೋಜನೆ 14 ದಿನಗಳ ಸಿಂಧುತ್ವ ಹೊಂದಿದೆ. ದಿನಕ್ಕೆ 1.5 ಜಿಬಿ ಡೇಟಾ ಲಭ್ಯವಿದೆ. ಒಟ್ಟು 21 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡಲಾಗುವುದು. ಇದು ಜಿಯೋದ ಆಲ್ ಇನ್ ಒನ್ ಯೋಜನೆಯಾಗಿದೆ. 4 ಜಿ ಡೇಟಾದೊಂದಿಗೆ ಅನಿಯಮಿತ ಕರೆ ಕೂಡ ಲಭ್ಯವಿದೆ. ಗ್ರಾಹಕರಿಗೆ ಈ ಯೋಜನೆಯಲ್ಲಿ ಅನಿಯಮಿತ ಕರೆ, ಜಿಯೋಟಿವಿ, ಜಿಯೋ ಸಿನೆಮಾ ಮತ್ತು ಜಿಯೋನ್ಯೂಸ್‌ನಂತಹ ಅಪ್ಲಿಕೇಶನ್ ಗೆ ಉಚಿತ ಪ್ರವೇಶ ಸಿಗಲಿದೆ. ದಿನಕ್ಕೆ ಈ ಯೋಜನೆಗಾಗಿ 7 ರೂಪಾಯಿ ಖರ್ಚು ಬರುತ್ತದೆ.