ಟೆಲಿಕಾಂ ಕಂಪನಿಗಳು ತಮ್ಮ ಯೋಜನೆ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಸುತ್ತಿವೆ. ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಪ್ಲಾನ್ ನಲ್ಲಿ ಏರಿಕೆಯಾಗಿದೆ.
ಪ್ರತಿ ನಿತ್ಯ ನಾವು ಫೋನ್ ಬಳಸ್ತೇವೆ. ಆದ್ರೆ ಅದ್ರ ಬಗ್ಗೆ ಕೆಲವೊಂದು ವಿಷ್ಯ ನಮಗೆ ತಿಳಿದಿಲ್ಲ. ಸಾಮಾನ್ಯವಾಗಿ ಟೆಲಿಕಾಂ ಕಂಪನಿಗಳ ಒಂದು ತಿಂಗಳ ರಿಚಾರ್ಜ್ ಪ್ಲಾನ್ 28 ದಿನ ಮಾತ್ರ ಇರುತ್ತದೆ. ಇದು ಏಕೆ ಎಂಬುದು ಅನೇಕರಿಗೆ ತಿಳಿದಿಲ್ಲ. ಕೇವಲ ಎರಡು ದಿನಗಳ ವ್ಯಾಲಿಡಿಟಿಯನ್ನು ಕಡಿಮೆ ಮಾಡಿ ಈ ಕಂಪನಿಗಳು ಕೋಟ್ಯಂತರ ರೂಪಾಯಿ ಗಳಿಸುತ್ತವೆ.
ಪ್ರತಿ ತಿಂಗಳು ರೀಚಾರ್ಜ್ ಮಾಡುವ ಪ್ಲಾನ್ ಹೊಂದಿರುವ ಗ್ರಾಹಕರು, ವರ್ಷದಲ್ಲಿ 12 ರ ಬದಲಿಗೆ 13 ತಿಂಗಳು ರಿಜಾರ್ಜ್ ಮಾಡ್ತಾರೆ. ಏಕೆಂದರೆ ಪ್ರತಿ ತಿಂಗಳಿನ ರೀಚಾರ್ಜ್ ದಿನ ಕೇವಲ 28 ದಿನಗಳಾಗಿರುತ್ತವೆ. ಹಾಗಾಗಿ 12 ತಿಂಗಳವರೆಗೆ 336 ದಿನಗಳು ಮಾತ್ರ ಬಳಕೆಗೆ ಸಿಗುತ್ತದೆ. ಈ ಉಪಾಯದಿಂದ ಟೆಲಿಕಾಂ ಕಂಪನಿಗಳು ಕೋಟ್ಯಾಂತರ ರೂಪಾಯಿಗಳನ್ನು ಗಳಿಸುತ್ತಿವೆ.
ಹೆಚ್ಚುವರಿ ರೀಚಾರ್ಜ್‌ನಿಂದ ಏರ್ಟೆಲ್ ಕಂಪನಿಯು ಸುಮಾರು 5415 ಕೋಟಿ ರೂಪಾಯಿ ಗಳಿಸುತ್ತದೆ. ರೀಚಾರ್ಜ್‌ನಿಂದ ಜಿಯೋ ಸುಮಾರು 6,168 ಕೋಟಿ ರೂಪಾಯಿಗಳನ್ನು ಗಳಿಸುತ್ತದೆ. ವೊಡಾಫೋನ್ ಐಡಿಯಾ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ರೀಚಾರ್ಜ್ ಪ್ಲಾನ್ ನಲ್ಲಿ ಬಳಕೆದಾರರಿಗೆ 90 ದಿನಗಳ ಬದಲಿಗೆ 84 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಅದೇ ರೀತಿ, ತಿಂಗಳ ರೀಚಾರ್ಜ್ 30 ರ ಬದಲಿಗೆ ಕೇವಲ 28 ದಿನಗಳನ್ನು ನೀಡುವ ಮೂಲಕ 2934 ಕೋಟಿ ರೂಪಾಯಿ ಗಳಿಸುತ್ತದೆ.