
ಸೂರಿ ಕುಂದರ್ ನಿರ್ದೇಶನದ ‘ಜಿಗರ್’ ಚಿತ್ರದ ಮೊದಲ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
‘ಸುಮ್ಮನೆ ನಗಬಹುದೇ ಹುಡುಗಿ’ ಎಂಬ ಈ ಹಾಡಿಗೆ ಸಂಜಿತ್ ಹೆಗಡೆ ಧ್ವನಿಯಾಗಿದ್ದು, ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದಾರೆ.
ಆಕ್ಷನ್ ಲವ್ ಸ್ಟೋರಿ ಕಥಾಂದರ ಹೊಂದಿರುವ ಈ ಚಿತ್ರವನ್ನು ಯುಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಪೂಜಾ ವಸಂತ್ ಕುಮಾರ್ ನಿರ್ಮಾಣ ಮಾಡಿದ್ದು, ಪ್ರವೀಣ್ ತೇಜ್ ಹಾಗೂ ವಿಜಯ್ ಶ್ರೀ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸೆಪ್ಟೆಂಬರ್ 9 ಮಧ್ಯಾಹ್ನ 12:34ಕ್ಕೆ ಈ ವಿಡಿಯೋ ಹಾಡು ಬಿಡುಗಡೆಯಾಗಲಿದೆ.
