ರಾಮ್ ಗಢ: ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ನಿರುದ್ಯೋಗಿ ಯುವಕನೊಬ್ಬ ತಂದೆಯನ್ನು ಕೊಲೆ ಮಾಡಿದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಕೃಷ್ಣ ರಾಮ್(55) ಪಟ್ಟ ವ್ಯಕ್ತಿ ಎಂದು ಹೇಳಲಾಗಿದೆ. ರಾಮ್ ಗಢ ಜಿಲ್ಲೆಯ ಬಾರ್ಕಾಕಾನ ಕೇಂದ್ರೀಯ ಕಲ್ಲಿದ್ದಲು ಘಟಕದಲ್ಲಿ ಅವರು ಮುಖ್ಯ ಭದ್ರತಾ ಸಿಬ್ಬಂದಿಯಾಗಿದ್ದರು. ಗುರುವಾರ ಮುಂಜಾನೆ ಅವರ ಗಂಟಲು ಸೀಳಿ ಕೊಲೆ ಮಾಡಲಾಗಿದ್ದು, ಆತನ 35 ವರ್ಷದ ಪುತ್ರನೇ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ.
ಉಪವಿಭಾಗೀಯ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹತೋ ಶನಿವಾರ ಈ ಕುರಿತು ಮಾಹಿತಿ ನೀಡಿದ್ದು, ಸಣ್ಣ ಹರಿತವಾದ ಚಾಕುವಿನಿಂದ ಗಂಟಲು ಸಿಡಿ ಪುತ್ರನೇ ಕೃಷ್ಣ ರಾಮ್ ಅವರನ್ನು ಕೊಲೆ ಮಾಡಿದ್ದಾನೆ. ಅನುಮಾನದ ಮೇಲೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಈ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೇಂದ್ರೀಯ ಕಲ್ಲಿದಲು ಘಟಕದ ನಿಬಂಧನೆಗಳ ಪ್ರಕಾರ, ನೌಕರ ಸೇವಾವಧಿಯಲ್ಲಿ ಮೃತಪಟ್ಟರೆ ಕಾನೂನುಬದ್ಧ ಅವಲಂಬಿತರಿಗೆ ಕೆಲಸ ಕೊಡಲಾಗುತ್ತದೆ. ಹೀಗಾಗಿ ಮಗನೇ ಇಂತಹ ಕೃತ್ಯವೆಸಗಿದ್ದಾನೆ ಎಂದು ತಿಳಿಸಿದ್ದಾರೆ.