
ನವದೆಹಲಿ: ಜಾರ್ಖಂಡ್ ವಿಧಾನಸಭೆ ಚುನಾವಣೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಮ್ಯಾಟ್ರಿಜ್ ಪ್ರಕಾರ NDA 42 ರಿಂದ 47, ಕಾಂಗ್ರೆಸ್ -ಜೆಎಂಎಂ ಮೈತ್ರಿಕೂಟ 25 ರಿಂದ 30, ಇತರರು 1-4 ಸ್ಥಾನ ಗಳಿಸಲಿದ್ದಾರೆ.
ಚಾಣಕ್ಯ ಸ್ಟ್ರಾಟಜೀಸ್ ಪ್ರಕಾರ NDA 45 ರಿಂದ 50, ಕಾಂಗ್ರೆಸ್ ಮೈತ್ರಿಕೂಟ 35 ರಿಂದ 38, ಇತರರು 3-5 ಸ್ಥಾನ ಜಯಗಳಿಸುವ ಸಾಧ್ಯತೆ ಇದೆ.
ಪೀಪಲ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 44 ರಿಂದ 53, ಕಾಂಗ್ರೆಸ್ ಮೈತ್ರಿಕೂಟ 25 ರಿಂದ 37, ಇತರರು 5 ರಿಂದ 9 ಸ್ಥಾನ ಜಯ ಗಳಿಸುವ ಸಾಧ್ಯತೆ ಇದೆ.
ಪೋಲ್ ಆಫ್ ಪೋಲ್ಸ್ ಸಮೀಕ್ಷೆಯ ಪ್ರಕಾರ ಬಿಜೆಪಿ ಮೈತ್ರಿಕೂಟ 43 ರಿಂದ 49, ಕಾಂಗ್ರೆಸ್ ಮೈತ್ರಿಕೂಟ 39 ರಿಂದ 44, ಇತರರು 3ರಿಂದ 11 ಸ್ಥಾನ ಜಯಗಳಿಸುವ ಸಾಧ್ಯತೆ ಇದೆ.
ಜಾರ್ಖಂಡ್ ನಲ್ಲಿ ಒಟ್ಟು 81 ಕ್ಷೇತ್ರಗಳಿದ್ದು ಬಹುಮತಕ್ಕೆ 41 ಸ್ಥಾನಗಳು ಬೇಕಿದೆ. ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಅಧಿಕಾರಕ್ಕೇರಲಿದೆ ಎಂದು ಹೇಳಲಾಗಿದೆ.