
ಜಾರ್ಖಂಡ್ ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಮೂರು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯೊಬ್ಬಳು ಗುಹೆಯಲ್ಲಿ ಪತ್ತೆಯಾಗಿದ್ದಾಳೆ. ಆದ್ರೆ ಆಕೆ ವರ್ತನೆ ವಿಚಿತ್ರವಾಗಿದೆ. ಹುಡುಗಿ ಹಾವಿನಂತೆ ವರ್ತಿಸುತ್ತಿದ್ದಾಳೆ.
ಗರ್ವಾ ಜಿಲ್ಲೆಯ ಕರಿವಾಡಿಹ್ ಗ್ರಾಮದಲ್ಲಿರುವ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಈ ಹುಡುಗಿ ಪತ್ತೆಯಾಗಿದ್ದಾಳೆ. ಹುಡುಗಿ ಅಲ್ಲಿದ್ದಾಳೆ ಎನ್ನುವ ಮಾಹಿತಿ ಪಡೆದ ಕುಟುಂಬಸ್ಥರು ಆಕೆಯನ್ನು ಹೊರಗೆ ತರಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಹುಡುಗಿ ಹೊರಗೆ ಬಂದಿರಲಿಲ್ಲ. ನಂತ್ರ ಗುಹೆ ಹೊರಗೆ ಕೀರ್ತನೆ ನಡೆದಿತ್ತು.
ರಾತ್ರಿ ಕತ್ತಲೆಯಲ್ಲಿ ಹುಡುಗಿ ಹೊರಗೆ ಬಂದಿದ್ದಾಳೆ. ಆಕೆ ಹೊರಗೆ ಬರ್ತಿರುವ ವಿಡಿಯೋ ವೈರಲ್ ಆಗಿದೆ. ಹುಡುಗಿ ಹಾವಿನಂತೆ ವರ್ತಿಸುತ್ತಿದ್ದಾಳೆ. ಆಕೆ ನಾಲಿಗೆಯನ್ನು ಅಲುಗಾಡಿಸುತ್ತಿರುವುದನ್ನು ಮತ್ತು ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡ್ಬಹುದು. ಆಕೆ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಕುಟುಂಬದ ವಿನಂತಿ ನಂತ್ರ ಹುಡುಗಿ ಶಾಂತವಾಗಿ ನಿಂತಿದ್ದಾಳೆ. ಆಕೆಯನ್ನು ಮನೆಗೆ ಕರೆದೊಯ್ಯಲಾಗಿದೆ.