ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಅಚ್ಚರಿ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಮ್ಮನಿಗೆ ಒಪ್ಪಿಸಿದ್ದಾನೆ. ಪತ್ನಿಯ ಮದುವೆಯನ್ನು ತಮ್ಮನ ಜೊತೆ ಮಾಡಿಸಿದ್ದಾನೆ. ಸ್ಥಳೀಯರಲ್ಲಿ ಇದು ಚರ್ಚೆಯ ವಿಷ್ಯವಾಗಿದೆ.
ಮದುವೆ ನಂತ್ರ ಮಹಿಳೆಗೆ ಮೈದುನನ ಮೇಲೆ ಪ್ರೀತಿ ಚಿಗುರಿತ್ತು. ಈ ವಿಷ್ಯ ಗೊತ್ತಾಗ್ತಿದ್ದಂತೆ ಆಕೆ ಪತಿ ದೃಢ ನಿರ್ಧಾರ ತೆಗೆದುಕೊಂಡ. ಪತ್ನಿಯ ಮದುವೆಯನ್ನು ತಮ್ಮನ ಜೊತೆ ಮಾಡಿಸಿದ್ದಾನೆ. ಮಹಿಳೆಗೆ ಇಬ್ಬರು ಮಕ್ಕಳಿವೆ. ಜಾರ್ಖಂಡ್ ನಿಂದ ಸೂರತ್ ಗೆ ಹೋಗಿದ್ದ ಮಹಿಳೆ ಗಂಡನ ಜೊತೆ ಇರುವ ಬದಲು ಮೈದುನನ ಜೊತೆ ಇದ್ದಳಂತೆ. ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕುತ್ತಿದ್ದರಂತೆ.
ಇದು ಗೊತ್ತಾಗ್ತಿದ್ದಂತೆ ಸಹೋದರನ ಮನೆಗೆ ಹೋದ ಪತಿ, ಇಬ್ಬರ ಜೊತೆ ಮಾತನಾಡಿದ್ದಾನೆ. ಇಬ್ಬರೂ ಒಟ್ಟಿಗಿರುವುದಾಗಿ ಹೇಳಿದ್ದಾರೆ. ಮದುವೆ ಸಂಬಂಧ ಬಂದಾಗಲೇ ಪತ್ನಿ ತನ್ನ ಸಹೋದರನನ್ನು ಇಷ್ಟಪಟ್ಟಿದ್ದಳು ಎಂಬುದು ಪತಿಗೆ ಗೊತ್ತಾಗಿದೆ. ಇಬ್ಬರ ಮಧ್ಯೆ ಹೋಗದಿರಲು ನಿರ್ಧರಿಸಿದ ಪತಿ, ಮದುವೆ ಮಾಡಿಸಿದ್ದಾನೆ.