ಪ್ರೀತಿ ಮಾಯೆ ಹುಷಾರು ಅಂತಾರೆ..! ಇಲ್ಲೊಬ್ಬ 19 ವರ್ಷದ ಯುವಕ ಪ್ರೀತಿ ಪ್ರೇಮದ ಗೀಳಿಗೆ ಬಿದ್ದು 15 ವರ್ಷದ ಬಾಲಕಿಯ ಪ್ರಾಣವನ್ನೇ ತೆಗೆದಿದ್ದಾನೆ..!
ಆಂಧ್ರಪ್ರದೇಶದ ಗರ್ವಾ ಜಿಲ್ಲೆಯ ಖರೋಂಧಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಿವಾಡಿ ಎಂಬಲ್ಲಿ ಇಂತಹದ್ದೊಂದು ದಾರುಣ ಘಟನೆ ವರದಿಯಾಗಿದೆ. 15 ವರ್ಷದ ಬಾಲಕಿಯನ್ನು ಚಾಕುವಿನಿಂದ ಇರಿದಿದ್ದು ಮಾತ್ರವಲ್ಲದೇ ಆಕೆಯ ಮೇಲೆ ಫೈರಿಂಗ್ ನಡೆಸಿದ್ದಾನೆ.
ಬಾಲಕಿಯನ್ನು ಯುವಕ ಪ್ರೀತಿಸುತ್ತಾ ಇದ್ದುದೆ ಈ ಕೃತ್ಯಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಇಮ್ತಿಯಾಜ್ ಅಲಿ ಎಂದು ಗುರುತಿಸಲಾಗಿದೆ. ಈತ 9ನೇ ತರಗತಿಯ ಶಬನಮ್ ಖತೂನ್ ಳಿಗೆ ಕಳೆದ ಅನೇಕ ದಿನಗಳಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನದ ಸುಮಾರಿಗೆ ಶಬನಮ್ ತನ್ನ ಆರು ಮಂದಿ ಸ್ನೇಹಿತರ ಜೊತೆಯಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಈತ ಆಕೆಯನ್ನು ಮಾತನಾಡಿಸಲು ಯತ್ನಿಸಿದ್ದಾನೆ. ಆಕೆಯ ಬಳಿ ಬಂದು ಚಾಕು ತೆಗೆದ ಯುವಕ ಆಕೆಗೆ ಇರಿದಿದ್ದಾನೆ.
ಆದರೆ ಇದಕ್ಕೆ ಶಬನಮ್ ವಿರೋಧ ವ್ಯಕ್ತಪಡಿಸಲು ಆರಂಭಿಸುತ್ತಿದ್ದಂತೆಯೇ ಇಮ್ತಿಯಾಜ್ ಆಕೆಯ ಮೇಲೆ ಕಂಟ್ರಿ ಮೇಡ್ ಪಿಸ್ತೂಲ್ನಿಂದ ಫೈರಿಂಗ್ ನಡೆಸಿದ್ದಾನೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಶಿದ್ನಗರದ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲದೇ ಮೃತ ಬಾಲಕಿಯ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ವೇಳೆ ಇಮ್ತಿಯಾಜ್ ಶಬನಮ್ಗೆ ಪ್ರೀತಿ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ ಎಂಬ ವಿಚಾರ ಬೆಳಕಿಗೆ ಬಂದಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಪ್ರಮೋದ್ ಹೇಳಿದ್ದಾರೆ.