ನಾಗರಿಕ ಸೇವೆಗಳಿಗೆ ಪ್ರವೇಶಿಸುವ ಕನಸು ಕಾಣುತ್ತಿರುವ ನೂರಾರು ಆಕಾಂಕ್ಷಿಗಳಿಗೆ ಉಚಿತವಾಗಿ ಟ್ಯೂಷನ್ ಹೇಳಿಕೊಡುತ್ತಿರುವ ಜಾರ್ಖಂಡ್‌ನ ಪೊಲೀಸ್ ಅಧಿಕಾರಿಯೊಬ್ಬರು ನೆಟ್ಟಿಗರ ಪಾಲಿನ ಹೀರೋ ಆಗಿದ್ದಾರೆ.
ಜಾರ್ಖಂಡ್ ಹಾಗೂ ನೆರೆಯ ಬಿಹಾರದ 250ಕ್ಕೂ ಹೆಚ್ಚು ಆಕಾಂಕ್ಷಿಗಳಿಗೆ ಆನ್ಲೈನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದಕೊಂಡು ಪಾಠ ಹೇಳಿಕೊಡುವ ವಿಕಾಸ್ ಚಂದ್ರ ಶ್ರೀವಾಸ್ತವ ಜಾರ್ಖಂಡ್ ಪೊಲೀಸ್ ಇಲಾಖೆಯಲ್ಲಿ ಡಿಎಸ್‌ಪಿಯಾಗಿದ್ದಾರೆ.
ಅನೌಪಚಾರಿಕ ಕ್ಷೇತ್ರದ ನೌಕರರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಸಾಮಾಜಿಕ ಭದ್ರತೆ ಯೋಜನೆ ತಲುಪಿಸಲು ಇ- ಶ್ರಮ್ ಪೋರ್ಟಲ್
ಯೂಟ್ಯೂಬ್ ಚಾನೆಲ್ ’ಡಿಎಸ್‌ಪಿ ಕಾ ಪಾಠ್‌ಶಾಲಾ’ ಮೂಲಕ 1600ಕ್ಕೂ ಹೆಚ್ಚಿನ ಚಂದಾದಾರರನ್ನು ಹೊಂದಿರುವ ಶ್ರೀವಾಸ್ತವ ತಮ್ಮ ಟ್ಯುಟೋರಿಯಲ್ ವಿಡಿಯೋಗಳನ್ನು ಇಲ್ಲಿ ಅಪ್ಲೋಡ್ ಮಾಡುತ್ತಾರೆ.
ರಾಂಚಿಯ ತನಿಖಾ ತರಬೇತಿ ಶಾಲೆಯಲ್ಲಿ ಪೋಸ್ಟ್ ಆಗಿರುವ ಶ್ರೀವಾಸ್ತವ ತಮ್ಮ ಮೊದಲ ಪೋಸ್ಟಿಂಗ್ ಅವಧಿಯಿಂದಲೂ ಹೀಗೆ ಉಚಿತ ಟ್ಯುಟೋರಿಯಲ್ ಕೊಡುತ್ತಾ ಬಂದಿದ್ದಾರೆ.