alex Certify ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ ಸೋದರ ಸೊಸೆ..! ಅಸೆಂಬ್ಲಿ ಮುಂದೆ ಧರಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರದ ವಿರುದ್ಧ ಸಿಡಿದೆದ್ದ ಸಿಎಂ ಸೋದರ ಸೊಸೆ..! ಅಸೆಂಬ್ಲಿ ಮುಂದೆ ಧರಣಿ

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮುಖ್ಯಸ್ಥ ಶಿಬು ಸೊರೆನ್ ಅವರ ಸೊಸೆ ಮತ್ತು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಸೋದರ ಸೊಸೆ ಪಕ್ಷದ ಶಾಸಕಿಯೂ ಆಗಿರುವ ಸೀತಾ ಸೊರೆನ್ ಅವರು ತಮ್ಮದೇ ಸರ್ಕಾರದ ನೀತಿಗಳ ವಿರುದ್ಧ ಬುಧವಾರ ವಿಧಾನಸಭೆಯ ದ್ವಾರದಲ್ಲಿ ಧರಣಿ ಕುಳಿತಿದ್ದಾರೆ. ಇದರಿಂದ ಆಡಳಿತರೂಢ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದೆ.

ಜಾರ್ಖಂಡ್ ನ ಜಲ, ಅರಣ್ಯ, ಭೂಮಿಯ ರಕ್ಷಣೆ ಕೋರಿ ಸದನಕ್ಕೆ ಬಂದಿದ್ದೇನೆ. ಸೆಂಟ್ರಲ್ ಕೋಲ್ ಫೀಲ್ಡ್ ಲಿಮಿಟೆಡ್ ನ ಆಮ್ರಪಾಲಿ ಯೋಜನೆಯಲ್ಲಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಲ್ಲಿದ್ದಲು ಸಾಗಿಸಲಾಗುತ್ತಿದೆ. ಆದರೆ ಅದನ್ನು ತಡೆಯಲು ಸರ್ಕಾರ ಏನೂ ಮಾಡುತ್ತಿಲ್ಲ. ಸಿಸಿಎಲ್‌ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿರುವ ಸೀತಾ ಸೊರೆನ್, ಇಷ್ಟೆಲ್ಲಾ ನಡೆಯುತ್ತಿದ್ದರೂ ರಾಜ್ಯ ಸರ್ಕಾರದಿಂದ ತೃಪ್ತಿಕರ ಉತ್ತರ ಬಂದಿಲ್ಲ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಾಹ್ಯಾಕಾಶದಲ್ಲಿ ಹೇರ್ ಕಟ್…! ವೈರಲ್ ಆದ ಸ್ಪೇಸ್ ವಿಡಿಯೋ

ನಮ್ಮ ಸರ್ಕಾರ ಮದ್ಯ ಮಾರಾಟ ಮಾಡಲು ಯೋಜಿಸುತ್ತಿರುವುದು ನಿಜವೇ…? ಶಿಬು ಸೊರೆನ್ ರಾಜ್ಯದಲ್ಲಿ ಮದ್ಯ ನಿಷೇಧದ ಬಗ್ಗೆ ಮಾತನಾಡುತ್ತಾರೆ ಆದರೆ ಹೇಮಂತ್ ಸೊರೆನ್ ಇದಕ್ಕೆ ವಿರುದ್ಧವಾಗಿ ಮದ್ಯ ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ಜೆಎಂಎಂನ ಮತ್ತೊಬ್ಬ ಶಾಸಕ ಲೋಬಿನ್ ಹೆಂಬ್ರಾಮ್ ಆಕ್ರೋಶ ಹೊರಹಾಕಿದ್ದಾರೆ.

Chief minister's sister-in-law sitting on dharna in the assembly against  her own government. Jharkhand CM's sister-in-law sits on dharna at assembly  gates against own govt - Digall

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...