ರಾಂಚಿ: ಜಾರ್ಖಂಡ್ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ವಾರಕ್ಕೊಮ್ಮೆ ರಾಜ್ಯ ನೀಡಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ಎಂ..ವಿ. ರಾವ್ ತಿಳಿಸಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ನೇಮಕಗೊಂಡವರಿಗೆ ಮಾತ್ರ ಈ ಸೌಲಭ್ಯವಿರುತ್ತದೆ ಹೊರತು ಪೊಲೀಸ್ ಕಚೇರಿಗಳಿಗೆ ಅನ್ವಯವಾಗಲ್ಲ. ಪೊಲೀಸರು ಕೆಲಸದ ಸಮಯದಲ್ಲಿ ಪೊಲೀಸರು ಮಾನಸಿಕ ಒತ್ತಡ ಅನುಭವಿಸುವುದನ್ನು ಕಡಿಮೆ ಮಾಡಲು ವಾರದ ರಜೆ ನೀಡಲಾಗುವುದು. ಮಾನಸಿಕ ಉದ್ವೇಗ ಕಡಿಮೆ ಮಾಡಿ ರಜೆ ಬಿಡುವಿನಲ್ಲಿ ಪುನಶ್ಚೇತನಗೊಂಡು ಅವರು ಕೆಲಸಕ್ಕೆ ಹಾಜರಾಗಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಸಾಪ್ತಾಹಿಕ ರಜೆ ನೀಡಲಾಗುವುದು. ನಂತರದಲ್ಲಿ ಇತರೆ ಪೊಲೀಸ್ ಕಚೇರಿಗಳಿಗೂ ಇದನ್ನು ವಿಸ್ತರಿಸುವ ಚಿಂತನೆ ಇದೆ ಎಂದು ಹೇಳಲಾಗಿದೆ.
ಪೋಲಿಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ಪೋಲಿಸರಿಗೆ ಕರ್ತವ್ಯದ ಸಮಯವನ್ನು 8 ಗಂಟೆಗೆ ಸೀಮಿತಗೊಳಿಸಿ ವಾರಂತ್ಯ ರಜೆ ನೀಡಬೇಕೆಂದು ಶಿಫಾರಸು ಮಾಡಿದೆ.