
ಹೌದು ತಮಿಳುನಾಡಿನ ಚೆನ್ನೈನಲ್ಲಿ ಜುವೆಲರ್ ಶಾಪ್ ಹೊಂದಿರುವ ಜಯಂತಿ ಲಾಲ್, ತಮ್ಮ ಉದ್ಯೋಗಿಗಳಿಗೆ ದೀಪಾವಳಿ ಅಂಗವಾಗಿ ಕಾರು ಹಾಗೂ ಬೈಕುಗಳನ್ನು ಗಿಫ್ಟ್ ಆಗಿ ನೀಡಿದ್ದಾರೆ.
10 ಮಂದಿ ಉದ್ಯೋಗಿಗಳಿಗೆ ಕಾರ್ ನೀಡಲಾಗಿದ್ದರೆ, 20 ಉದ್ಯೋಗಿಗಳಿಗೆ ಬೈಕುಗಳನ್ನು ಕೊಡಲಾಗಿದೆ. ಈ ಕುರಿತಂತೆ ಮಾತನಾಡಿರುವ ಜಯಂತಿ ಲಾಲ್, ನನ್ನ ಏಳುಬೀಳು ನಡುವೆಯೂ ಉದ್ಯೋಗಿಗಳು ನನಗೆ ಸಾಥ್ ನೀಡಿದ್ದಾರೆ. ಅವರ ಶ್ರಮದ ಕಾರಣಕ್ಕಾಗಿಯೇ ನಾನು ಇಂದು ಈ ಸ್ಥಾನ ತಲುಪಿದ್ದೇನೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಉಡುಗೊರೆ ನೀಡಿದ್ದೇನೆ ಎಂದಿದ್ದಾರೆ.