alex Certify OMG : ಮನೆಗೆ 4 ಲಕ್ಷ ವಿದ್ಯುತ್ ಬಿಲ್ ನೀಡಿದ ‘ಜೆಸ್ಕಾಂ’ ಸಿಬ್ಬಂದಿ : ಹೌಹಾರಿದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG : ಮನೆಗೆ 4 ಲಕ್ಷ ವಿದ್ಯುತ್ ಬಿಲ್ ನೀಡಿದ ‘ಜೆಸ್ಕಾಂ’ ಸಿಬ್ಬಂದಿ : ಹೌಹಾರಿದ ಗ್ರಾಹಕ

ಬಳ್ಳಾರಿ : ಮನೆ ಮಾಲೀಕನಿಗೆ ಜೆಸ್ಕಾಂ ಸಿಬ್ಬಂದಿ ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 4 ಲಕ್ಷ ವಿದ್ಯುತ್ ಬಿಲ್ ನೋಡಿದ ಮನೆ ಮಾಲೀಕ ಸುಸ್ತು ಹೊಡೆದಿದ್ದಾನೆ.

ಯೆಸ್, ಬಳ್ಳಾರಿಯ ಇಂದಿರಾ ನಗರ ನಿವಾಸಿ ಮಹೇಶ್ ಅವರ ಮನೆಗೆ ಈ ತಿಂಗಳು 4,25,852 ರೂ ಕರೆಂಟ್ ಬಿಲ್ ಬಂದಿದೆ.ಇದನ್ನು ಕಂಡ ಗ್ರಾಹಕ ಹೌಹಾರಿದ್ದಾನೆ. ಯಾವಾಗಲೂ ನಮ್ಮ ಮನೆಗೆ 1500 ರಿಂದ 1700 ರೂ ಕರೆಂಟ್ ಬಿಲ್ ಬರುತ್ತಿತ್ತು.ಆದರೆ ಈಗ ಇಷ್ಟೊಂದು ದುಬಾರಿ ಬಿಲ್ ಬಂದಿದೆ ಎಂದು ಹೇಳಿದ್ದಾರೆ.

ಈ ಸಂಬಂಧ ಮಹೇಶ್ ದೂರು ನೀಡಿದ ಬಳಿಕ ಮನೆಗೆ ಬಂದ ಜೆಸ್ಕಾಂ ಸಿಬ್ಬಂದಿ 885 ರೂ ಬಿಲ್ ನೀಡಿದ್ದಾರೆ. ಒಂದೆಡೆ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದ್ದು, ಇನ್ನೊಂದೆಡೆ ವಿದ್ಯುತ್ ಬೆಲೆ ಕೂಡ ಏರಿಕೆಯಾಗಿದೆ. ಹಲವು ಕಡೆ ಕರೆಂಟ್ ಬಿಲ್ ಹೆಚ್ಚು ಬರುತ್ತಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...