ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಅಧಿಕಾರ ವಹಿಸಿಕೊಂಡಿದ್ದಾರೆ.
ಬೈಡೆನ್ 46ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿ ಭಾರತ ಮೂಲದ ಕಮಲಾ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕಾರದ ಬೆನ್ನಲ್ಲೇ 15 ಮಹತ್ವದ ಆದೇಶಗಳಿಗೆ ಬೈಡೆನ್ ಸಹಿ ಮಾಡಿದ್ದಾರೆ.
ಅದರಲ್ಲಿ ಭಾರತೀಯ ಮೂಲದ ಟೆಕ್ಕಿಗಳಿಗೆ ಪೌರತ್ವ ಕೊಡುಗೆ ನೀಡಲಾಗಿದೆ. ಗ್ರೀನ್ ಕಾರ್ಡ್ ಮೇಲಿನ ದೇಶವಾರು ಮಿತಿಯನ್ನು ರದ್ದುಪಡಿಸಲಾಗಿದ್ದು ಅಮೆರಿಕದ ಕಾಯಂ ವಾಸಿ ಆಗುವ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಅಧಿಕಾರ ಸ್ವೀಕಾರದ ಬೆನ್ನಲ್ಲೇ ಸಂಸತ್ತಿಗೆ ಈ ಪ್ರಸ್ತಾವನೆ ಸಲ್ಲಿಸಲು ಅಧ್ಯಕ್ಷರು ಮುಂದಾಗಿದ್ದಾರೆ. ಡೊನಾಲ್ಡ್ ಟ್ರಂಪ್ ನೀತಿಯಿಂದ ಕಂಗೆಟ್ಟಿದ್ದ ಭಾರತೀಯ ಟೆಕ್ಕಿಗಳಿಗೆ ಇದರಿಂದ ಅನುಕೂಲವಾಗಲಿದೆ ಎನ್ನಲಾಗಿದೆ.